ಬೆಳಗಾವಿ : ಮತಾಂತರ ನಿಷೇಧ ಕಾಯ್ದೆ ಜಾರಿಯಿಂದ ಅಲ್ಪಸಂಖ್ಯಾತರ ರಕ್ಷಣೆಯಾಗಬೇಕು, ಅಲ್ಪಸಂಖ್ಯಾತರು ಮತಾಂತರ ಆದರೆ ಏನು ಮಾಡಬೇಕು,ಹಾಗಾಗಿ ಅವರ ರಕ್ಷಣೆಗಾಗಿ ಕಾಯ್ದೆ ಜಾರಿ ಮಾಡುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.
ಅವರ ಧರ್ಮವನ್ನು ಅವರು ಸ್ವತಂತ್ರವಾಗಿ ರಕ್ಷಣೆ ಮಾಡಬಹುದು. ಯಾರೂ ಭಯ ಪಡುವ ಅವಶ್ಯಕತೆ ಇಲ್ಲ. ಬಲವಂತವಾಗಿ ಮತಾಂತರ ಮಾಡಬಾರದು, ಹೀಗಾಗಿ ಕಾಯ್ದೆ ತರುತ್ತಿರುವುದು .ಅವರ ಬಿಸ್ ನೆಸ್ ಬಂದ್ ಆಗುತ್ತದೆ ಅಂತ ಹೀಗೆ ಹೇಳುತ್ತಿದ್ದಾರೆ.
ಕಾಂಗ್ರೆಸ್ ಗೂ ಇಂದೊಂದು ಬಿಸ್ ನೆಸ್. ಕಾಯ್ದೆ ತರುವುದು ಅಲ್ಪಸಂಖ್ಯಾತರ ಹಿತದೃಷ್ಟಿಯಿಂದ ಎಂದರು.
ಪ್ರಬುದ್ದರು ಈ ಬಗ್ಗೆ ಚರ್ಚೆ ನಡೆಸಲಿ. ಯಾರು ವಿದ್ವಾಂಸರಿದ್ದಾರೆ ಅವರು ಚರ್ಚೆ ಮಾಡಲಿ. ಹಿಂದೂ ಸನಾತನ ಧರ್ಮದ ಬಗ್ಗೆ ಚರ್ಚೆಯಾಗಲಿ. ಆದರೆ ಹಣದ ಮೂಲಕ ಬಿಸ್ ನೆಸ್ ಮಾಡುವುದು ಸರಿಯಲ್ಲ. ಸಮಾಜದ ಸ್ವಾಸ್ಥ್ಯ ಹಾಗೂ ಹಿತದೃಷ್ಟಿಯಿಂದ ಕಾಯ್ದೆ ತರಲೇ ಬೇಕು. ಇದರ ವಿರುದ್ಧದ ಷಡ್ಯಂತ್ರವನ್ನ ನಾನು ಖಂಡಿಸುತ್ತೇನೆ. ಈ ಕಾಯ್ದೆ ನಾನು ಸ್ವಾಗತಿಸುತ್ತೇನೆ ಎಂದರು.