ಮತಾಂತರ ನಿಷೇಧ ಕಾಯ್ದೆ| ಗುಜರಾತ್‌ನಲ್ಲಿ ಪ್ರಕರಣದ ಮೊದಲ ಆರೋಪಿಗಳಿಗೆ ಜಾಮೀನು

Prasthutha|

ಅಹಮದಾಬಾದ್: ಮತಾಂತರ ನಿಷೇಧ ಕಾಯ್ದೆಯಡಿ ಗುಜರಾತ್ ನಲ್ಲಿ ದಾಖಲಾದ ಮೊದಲ ಪ್ರಕರಣದ ಎಲ್ಲಾ ಆರೋಪಿಗಳಿಗೆ ಗುಜರಾತ್ ಹೈಕೋರ್ಟ್ ಜಾಮೀನು ನೀಡಿದೆ.

- Advertisement -

ಪ್ರಕರಣದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ದೂರುದಾರರು ಮತ್ತು ಆರೋಪಿಗಳು ಸಲ್ಲಿಸಿದ ಜಂಟಿ ಅರ್ಜಿಯಲ್ಲಿ ಗುಜರಾತ್ ಹೈಕೋರ್ಟ್ ಬುಧವಾರ ಎಲ್ಲಾ ಆರೋಪಿಗಳಿಗೆ ಜಾಮೀನು ನೀಡಿದೆ. ಎಫ್ಐಆರ್ ಅನ್ನು ರದ್ದುಗೊಳಿಸಬೇಕೇ ಎಂಬುದನ್ನು ನ್ಯಾಯಾಲಯವು ನಂತರ ನಿರ್ಧರಿಸುತ್ತದೆ ಎಂದು ಮಧ್ಯಂತರ ಆದೇಶದಲ್ಲಿ ತಿಳಿಸಲಾಗಿದೆ.

ಪೊಲೀಸರು ದಾಖಲಿಸಿರುವ ಎಫ್‌ಐಆರ್ ದಾರಿತಪ್ಪಿಸುವ ಮತ್ತು ವಾಸ್ತವಿಕವಾಗಿ ತಪ್ಪು ಮಾಹಿತಿಯನ್ನು ಒಳಗೊಂಡಿದೆ ಪ್ರಕರಣದಲ್ಲಿ ದೂರುದಾರರು ಸಲ್ಲಿಸಿದ ಮನವಿಯಲ್ಲಿ ಉಲ್ಲೇಖಿಸಲಾಗಿದೆ.



Join Whatsapp