ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಕಾಲೇಜು ಗೋಡೆಗಳ ಮೇಲೆ ಅಶ್ಲೀಲ ಬರಹ

Prasthutha|

ಕೊಪ್ಪಳ: ಜಿಲ್ಲೆಯ ಕನಕಗಿರಿ ಪಟ್ಟಣದ ಸರ್ಕಾರಿ ಕಾಲೇಜಿನಲ್ಲಿ ಕಿಡಿಗೇಡಿಗಳ ಕಾಟ ಮತ್ತೆ ಆರಂಭವಾಗಿದೆ.

- Advertisement -

ಕಿಡಗೇಡಿಗಳು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಕಾಲೇಜಿನ ಗೋಡೆಗಳ ಮೇಲೆ ಅಶ್ಲೀಲವಾಗಿ ಬರೆದಿದ್ದು, ಈ ಬರಹಗಳನ್ನು ಕಂಡು ವಿದ್ಯಾರ್ಥಿನಿಯರು ಕಣ್ಣೀರು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ವಿದ್ಯಾರ್ಥಿನಿಯರ ತೇಜೋವಧೆ‌ ಮಾಡುವಂತ ಅತೀ ಕೆಟ್ಟ ಭಾಷೆಯಲ್ಲಿ ಗೋಡೆ ಮೇಲೆ ಬರೆಯಲಾಗಿದೆ. ಇದರಿಂದ ವಿದ್ಯಾರ್ಥಿನಿಯರು ಮನನೊಂದಿದ್ದು, ಕಾಲೇಜಿಗೆ ಬರುವುದಕ್ಕೆ ಹೆದರುತ್ತಿದ್ದಾರೆ. ಇಂತಹ ಘಟನೆ ಇದೇ ಮೊದಲಲ್ಲ ಕಳೆದ ನಾಲ್ಕೈದು ತಿಂಗಳಿನಿಂದ ನಡೆಯುತ್ತಿದೆ ಎನ್ನಲಾಗಿದೆ.

- Advertisement -

ಕಳೆದ ಒಂದು ವಾರದ ಹಿಂದೆ ಇದೇ ರೀತಿಯಾಗಿ ಗೋಡೆ ಮೇಲೆ ಅಶ್ಲೀಲವಾಗಿ ಬರೆಯಲಾಗಿತ್ತು. ಇದಾದ ನಂತರ ಸುಮ್ಮನಿಂದ ಕಿರಾತರಕು, ಇದೀಗ ಮತ್ತೆ ನಿನ್ನೆ (ಜು.15) ರಂದು ಮತ್ತೆ ಗೋಡೆ ಮೇಲೆ ಎಲ್ಲೆಂದರಲ್ಲಿ ಬರೆಯಲಾಗಿದೆ. ಇನ್ನು ಆರೋಪಿಗಳನ್ನು ಬಂಧಿಸದ ಹಿನ್ನೆಲೆ ಪೊಲೀಸರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp