ಪ್ರೊ ಕಬಡ್ಡಿ ಲೀಗ್‌ | ಸೆಮಿಫೈನಲ್‌’ನಲ್ಲಿ ಬೆಂಗಳೂರು ಬುಲ್ಸ್‌ – ಪಿಂಕ್‌ ಪ್ಯಾಂಥರ್ಸ್‌ ಮುಖಾಮುಖಿ

Prasthutha|

ಬೆಂಗಳೂರು: ಪ್ರೊ ಕಬಡ್ಡಿ ಲೀಗ್‌’ನ 9ನೇ ಆವೃತ್ತಿಯ ಮೊದಲ ಸೆಮಿಫೈನಲ್‌’ನಲ್ಲಿ ಬೆಂಗಳೂರು ಬುಲ್ಸ್‌, ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡದ ಸವಾಲನ್ನು ಎದುರಿಸಲಿದೆ. ಬಳಿಕ ನಡೆಯುವ ಎರಡನೇ ಸೆಮಿಫೈನಲ್‌’ನಲ್ಲಿ ತಮಿಳು ತಲೈವಾಸ್‌, ಪುಣೇರಿ ಪಲ್ಟಾನ್ ತಂಡಗಳು ಮುಖಾಮುಖಿಯಾಗಲಿವೆ. ಮುಂಬೈನ ಸರ್ದಾರ್ ವಲ್ಲಭಭಾಯಿ ಪಟೇಲ್ ಒಳಾಂಗಣ ಕ್ರೀಡಾಂಗಣದಲ್ಲಿ ಸೆಮಿ ಹೋರಾಟಗಳು ನಡೆಯಲಿವೆ.

- Advertisement -

ಮಂಗಳವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ತಂಡವು 56–24 ಅಂಕಗಳ ಅಂತರದಲ್ಲಿ ದಬಾಂಗ್‌ ಡೆಲ್ಲಿ ವಿರುದ್ಧ ಜಯ ಸಾಧಿಸಿತ್ತು. ಯುಪಿ ಯೋಧ ಮತ್ತು ತಮಿಳು ತಲೈವಾಸ್ ನಡುವೆ ನಡೆದ ಎರಡನೇ ಎಲಿಮಿನೇಟರ್ ಪಂದ್ಯವು ಟೈ ಆಗಿತ್ತು ಬಳಿಕ ಉಭಯ ತಂಡಗಳಿಗೆ ತಲಾ 5 ರೈಡ್‌ ನೀಡಿದಾಗ ತಲೈವಾಸ್‌ 6-4 ಪಾಯಿಂಟ್ಸ್‌’ನಿಂದ ಜಯ ಸಾಧಿಸಿ ಸೆಮಿಗೆ ಲಗ್ಗೆಯಿಟ್ಟಿತು.

ರೈಡಿಂಗ್‌’ನಲ್ಲಿ ಭರತ್ ಮತ್ತು ವಿಕಾಶ್ ಖಂಡೋಲಾ ಬೆಂಗಳೂರು ತಂಡದ ಪ್ರಮುಖ ಶಕ್ತಿಯಾಗಿದ್ದಾರೆ. ನೀರಜ್‌ ನರ್ವಾಲ್‌ ಮತ್ತು ಸಚಿನ್‌ ನರ್ವಾಲ್‌ ಕೂಡ ತಂಡಕ್ಕೆ ಆಧಾರಸ್ತಂಭವಾಗಿದ್ದಾರೆ. ಮತ್ತೊಂದೆಡೆ ಲೀಗ್‌ ಹಂತದಲ್ಲಿ ಅಗ್ರಸ್ಥಾನಿಯಾಗಿ ಸ್ಪರ್ಧೆ ಮುಗಿಸಿರುವ ಪಿಂಕ್‌ ಪ್ಯಾಂಥರ್ಸ್‌ ಅರ್ಜುನ್‌ ದೇಶ್ವಾಲ್‌ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.

Join Whatsapp