9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್: ಕಂಠೀರವ ಕ್ರೀಡಾಂಗಣದಲ್ಲಿ  ಕ್ಷಣಗಣನೆ

Prasthutha|

ಬೆಂಗಳೂರು: ಒಂಬತ್ತನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ  ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಮತ್ತು ಯು ಮುಂಬಾ ತಂಡಗಳು ಮುಖಾಮುಖಿಯಾಗಲಿವೆ. ಬಳಿಕ ನಡೆಯುವ ಎರಡನೇ ಪಂದ್ಯದಲ್ಲಿ ಆತಿಥೇಯ ಬೆಂಗಳೂರು ಬುಲ್ಸ್ ತಂಡಕ್ಕೆ ತೆಲುಗು ಟೈಟನ್ಸ್ ಸವಾಲು ಮೊದಲ ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ.

- Advertisement -

12 ತಂಡಗಳು ಭಾಗವಹಿಸಲಿರುವ ಪ್ರೊ ಕಬಡ್ಡಿ ಲೀಗ್ನ ಒಂಬತ್ತನೇ ಆವೃತ್ತಿಯ ಮೊದಲ ಮೂರು ದಿನ, ಪ್ರತಿನಿತ್ಯ ತಲಾ ಮೂರು ಪಂದ್ಯಗಳು ನಡೆಯಲಿವೆ.

ಇದರೊಂದಿಗೆ ಮೂರೇ ದಿನಗಳಲ್ಲಿ ಎಲ್ಲ 12 ತಂಡಗಳ ಆಟವನ್ನೂ ಸವಿಯಬಹುದಾಗಿದೆ.

- Advertisement -

 ಮೊದಲ ಹಂತದ ಪಂದ್ಯಗಳು ಅಕ್ಟೋಬರ್ 7 ರಿಂದ 26ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಕೊರೊನಾ ಕಾರಣದಿಂದಾಗಿ ಕಳೆದ ವರ್ಷ ಮುಚ್ಚಿದ ಮೈದಾನದಲ್ಲಿ  ಪಂದ್ಯಾಕೂಟ ನಡೆದಿತ್ತು. ಇದೀಗ 3 ವರ್ಷಗಳ ಬಳಿಕ ಪ್ರೇಕ್ಷಕರಿಗೆ ಮುಕ್ತ ಅವಕಾಶ ನೀಡಲಾಗಿದ್ದು, ಉದ್ಯಾನ ನಗರಿಯಲ್ಲಿ ಕಬಡ್ಡಿ ಕ್ರೇಜ್‌ ದೊಡ್ಡ ಮಟ್ಟದಲ್ಲಿದೆ.

 ಬೆಂಗಳೂರು ಚರಣದ ಬಳಿಕ ಪುಣೆ ಮತ್ತು ಹೈದರಾಬಾದ್‌‌ನಲ್ಲಿ ಪ್ರೊ ಕಬಡ್ಡಿ ಪಂದ್ಯಾವಳಿಯ 9ನೇ ಆವೃತ್ತಿ ಮುಂದುವರಿಯಲಿದೆ.

 ಕಳೆದ ವರ್ಷ ಬೆಂಗಳೂರಿನಲ್ಲೇ ಪ್ರೊ ಕಬಡ್ಡಿ ನಡೆದಿದ್ದರೂ, ಸಂಪೂರ್ಣ ಜೈವಿಕ ಸುರಕ್ಷತಾ ವಲಯವನ್ನು ರಚಿಸಲಾಗಿತ್ತು.



Join Whatsapp