ಶಾಸಕ ಪ್ರಿಯಾಂಕ್ ಖರ್ಗೆ ಪತ್ನಿ ಮೊಬೈಲ್ ಕಳವು‌: ಆರೋಪಿಗಳ ಸೆರೆ

Prasthutha|

ಬೆಂಗಳೂರು: ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರ ಪತ್ನಿ ಶೃತಿಯವರ ಮೊಬೈಲ್ ಕಸಿದು‌ ಪರಾರಿಯಾಗಿದ್ದ ಐವರು ಆರೋಪಿಗಳನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.

- Advertisement -

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಬೀ, ಅಸ್ಲಂ, ಮೊಹೀನ್, ಶೇಕ್ ಇಲಿಯಾಸ್ ಜೊತೆಗೆ ಮತ್ತೊಬ್ಬ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.

ಕಳೆದ ಫೆ. 6ರಂದು ಡಾಲರ್ಸ್ ಕಾಲೋನಿಯಲ್ಲಿ ವಾಕಿಂಗ್ಗೆ ತೆರಳಿದ್ದ ಶೃತಿ ಅವರ ಮೊಬೈಲ್ ಕಸಿದುಕೊಂಡು ಆರೋಪಿಗಳು ಪರಾರಿಯಾಗಿದ್ದರು. ಕಳವು ಮಾಡಿದ ಮೊಬೈಲ್ ಅನ್ನು ಪಾದರಾಯನಪುರದಲ್ಲಿ ಮಾರಾಟ ಮಾಡಿದ್ದರು.

- Advertisement -

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡ ಸದಾಶಿವನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿ 30 ಪ್ರಕರಣಗಳನ್ನು ಭೇದಿಸಿದ್ದಾರೆ.

ಮೊಯಿನ್ ಎಂಬಾತ ಪಾದರಾಯನಪುರದ ಅಸ್ಲಂ ಗೆ ಕದ್ದ ಮೊಬೈಲ್ಗಳನ್ನು ಮಾರುತ್ತಿದ್ದ ಎಂದು ಹೇಳಲಾಗಿದೆ. ಅಸ್ಲಂ ಎಂಬಾತ ಮೊಯಿನ್, ಜಬಿ ಸೇರಿದಂತೆ ಸಾಕಷ್ಟು ಹುಡುಗರನ್ನು ಮೊಬೈಲ್ ಕಳ್ಳತನ ಮಾಡಲು ಮುಂಗಡ ಹಣ ಕೊಟ್ಟು‌ ಇಟ್ಟುಕೊಂಡಿದ್ದ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಬಂಧಿತರ ವಿಚಾರಣೆ ವೇಳೆ ಹೆಚ್.ಎಸ್.ಆರ್‌ ಲೇಔಟ್ ಠಾಣಾ ವ್ಯಾಪ್ತಿಯ ಪ್ರಕರಣಗಳೂ ಸೇರಿದಂತೆ ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ. ಮೊಬೈಲ್ ಎಗರಿಸಲು ಈ ಗ್ಯಾಂಗ್ ಕದ್ದ ಬೈಕ್ ಹಾಗೂ ನಂಬರ್ ಪ್ಲೇಟ್ ಬದಲಿಸುತ್ತಿರುವುದು ಪತ್ತೆಯಾಗಿದ್ದು ಹೆಚ್ಚಿನ ತನಿಖೆಯನ್ನು ಮುಂದುವರಿಸಲಾಗಿದೆ.



Join Whatsapp