ಮಣಿಕಂಠ ಮೇಲಿನ ಹಲ್ಲೆಗೂ ಪ್ರಿಯಾಂಕ್‌ ಖರ್ಗೆಗೂ ಸಂಬಂಧವಿಲ್ಲ: ದಲಿತ ಮುಖಂಡ

Prasthutha|

ಚಿತ್ತಾಪುರ: ಇತ್ತೀಚೆಗೆ ಶಹಾಬಾದ್ ಸಮೀಪ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ನಡೆದಿದ್ದು, ಈ ಹಲ್ಲೆಗೂ ಸಚಿವ ಪ್ರಿಯಾಂಕ್ ಖರ್ಗೆಗೂ ಸಂಬಂಧ ಕಲ್ಪಿಸಲಾಗುತ್ತಿದೆ. ಆದರೆ ಈ ಹಲ್ಲೆಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ಆದರೂ ಬಿಜೆಪಿಯವರು ಈ ಘಟನೆಯಲ್ಲಿ ಪ್ರಿಯಾಂಕ್ ಅವರ ಹೆಸರು ಕೆಡಿಸಲು ಹುನ್ನಾರ ಮಾಡುತ್ತಿದ್ದಾರೆ ಎಂದು ದಲಿತ ಮುಖಂಡ ಮಲ್ಲಪ್ಪ ಹೊಸಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಣಿಕಂಠ ಅವರ ಮೇಲೆ ನಡೆದಿರುವ ಹಲ್ಲೆಯನ್ನು ದಲಿತ ಸಂಘಟನೆಗಳು ಒಪ್ಪೋದಿಲ್ಲ. ಆ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು. ಆದರೆ, ಆಂದೋಲಾದ ಸಿದ್ಧಲಿಂಗ ಸ್ವಾಮಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ ಮುಂತಾದವರು ಸುಖಾಸುಮ್ಮನೆ ಪ್ರಿಯಾಂಕ್ ಖರ್ಗೆಯವರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಹುರುಳಿಲ್ಲದ ಆರೋಪ ಮಾಡಿ ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

ಯಾವುದಕ್ಕೂ ಮಣಿಕಂಠ ಅವರ ಹಿನ್ನೆಲೆ ಗಮನಿಸಿ ಮಾತಾಡಲಿ. ಅವರು ರೌಡಿಶೀಟರ್ ಆಗಿದ್ದು, ಅವರ ವಿರುದ್ಧ ಅನೇಕ ಪ್ರಕರಣ ದಾಖಲಾಗಿವೆ. ಸಮಾಜದಲ್ಲಿ ಅಶಾಂತಿ ಮೂಡಿಸಲು ಪ್ರಯತ್ನಿಸೋ ವ್ಯಕ್ತಿ ಆತ. ಇದೇ ಆಂದೋಲಾ ಸ್ವಾಮಿ ವಿರುದ್ಧವೂ ಅನೇಕ ಪ್ರಕರಣ ದಾಖಲಾಗಿವೆ. ಅವರೂ ಸಹ ಸಮಾಜದಲ್ಲಿ ದ್ವೇಷ ಭಾವನೆ ಹರಡಲು ಯತ್ನಿಸಿ ಪ್ರಿಯಾಂಕ್ ಅವರ ವಿರುದ್ಧ ಸತ್ಯಕ್ಕೆ ದೂರವಾದ ಆರೋಪ ಮಾಡುತ್ತಿದ್ದಾರೆ ಎಂದು ಅವರು ದೂರಿದರು.




Join Whatsapp