ಲಿಖಿತ ಉತ್ತರ ನೀಡಿ ವಿಚಾರಣೆಯಿಂದ ಜಾರಿಕೊಂಡ ಪ್ರಿಯಾಂಕ್ ಖರ್ಗೆ

Prasthutha|

ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದ ಆಡಿಯೋ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರು ಸಿಐಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗದೇ ಲಿಖಿತ ಉತ್ತರ ನೀಡಿದ್ದಾರೆ.

- Advertisement -


ಅಕ್ರಮದ ಆಡಿಯೋ ಬಿಡುಗಡೆ ಮಾಡಿದ್ದ ಸಂಬಂಧಿಸಿದಂತೆ ಮೂರು ಬಾರಿ ನೋಟೀಸ್ ಜಾರಿ‌ ಮಾಡಿದ್ದರೂ ವಿಚಾರಣೆಗೆ ಹಾಜರಾಗದ ಶಾಸಕ ಪ್ರಿಯಾಂಕ್ ಖರ್ಗೆ ಅವರು ಲಿಖಿತ ಉತ್ತರ ಕಳುಹಿಸಿ ಮೌಖಿಕ ವಿಚಾರಣೆಯಿಂದ ಜಾರಿಕೊಂಡಿದ್ದಾರೆ.
ಶಾಸಕ ಪ್ರಿಯಾಂಕ್ ಖರ್ಗೆ ಅವರು ಆಪ್ತ ಸಹಾಯಕನ ಮೂಲಕ ಸಿಐಡಿ‌ ಅಧಿಕಾರಿಗಳಿಗೆ ನಿನ್ನೆ ಸಂಜೆ 6 ಪುಟಗಳ ಸುದೀರ್ಘ ಉತ್ತರ ಕಳುಹಿಸಿ ಕೊಟ್ಟಿದ್ದಾರೆ.


ಆಡಿಯೋ ಬಿಡುಗಡೆ ಮಾಡಿದ ಬಳಿಕ ಹೆಚ್ಚಿನ ಮಾಹಿತಿ ನೀಡುವಂತೆ ಸಿಐಡಿ ನೋಟಿಸ್ ನೀಡಿತ್ತು. ಮೊದಲ ನೋಟಿಸ್​ಗೆ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದರು. 2ನೇ ನೋಟಿಸ್ ಸ್ವೀಕರಿಸದೆ ವಾಪಸ್ ಕಳುಹಿಸಿದ್ದರು. ಖುದ್ದು ಹಾಜರಾಗುವಂತೆ ಸಿಐಡಿ 3ನೇ ನೋಟಿಸ್ ನೀಡಿತ್ತು. ಆದರೆ ಶಾಸಕರು ಹಾಜರಾಗದೆ ಲಿಖಿತ ಉತ್ತರ ಕೊಟ್ಟಿದ್ದಾರೆ.

Join Whatsapp