ಬಿಹಾರ | ಐದರ ಬಾಲಕನ ಮೇಲೆ ಕ್ರೂರವಾಗಿ ಥಳಿಸಿದ ಖಾಸಗಿ ಟ್ಯೂಷನ್ ಶಿಕ್ಷಕ; ಸ್ಥಿತಿ ಗಂಭೀರ

Prasthutha|

ಪಾಟ್ನಾ: ಖಾಸಗಿ ಟ್ಯೂಷನ್ ಶಿಕ್ಷಕನೊಬ್ಬ ದಪ್ಪದ ಮರದ ಕೋಲಿನಿಂದ ಐದರ ಹರೆಯದ ಬಾಲಕನೊಬ್ಬನಿಗೆ ಮನಬಂದಂತೆ ಥಳಿಸಿದ ಹೃದಯವಿದ್ರಾವಕ ಘಟನೆ ಬಿಹಾರದಲ್ಲಿ ನಡೆದಿದೆ. ಅದರ ವೀಡಿಯೋ ವೈರಲ್ ಆಗಿದ್ದು, ಬಾಲಕ ನೋವಿನಿಂದ ಜೋರಾಗಿ ಕಿರುಚುತ್ತಿರುವುದು ಸೆರೆಯಾಗಿದೆ.

- Advertisement -

ಮಗುವನ್ನು ಮೊದಲು ಕೋಲು ಮುರಿಯುವವರೆಗೂ ಥಳಿಸಿದ ಬಳಿಕ ಗುದ್ದಿದ ಶಿಕ್ಷಕ ನಂತರ ಕಪಾಳಮೋಕ್ಷ ಕೂಡ ಮಾಡುತ್ತಾನೆ. ಹುಡುಗ ಅಳುತ್ತಲೇ ಹೊಡೆಯದಂತೆ ಮನವಿ ಮಾಡಿದರೂ ಶಿಕ್ಷಕ ಚಿತ್ರಹಿಂಸೆ ಮುಂದುವರಿಸಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಶಿಕ್ಷಕನಿಂದ ನಿರ್ದಯವಾಗಿ ಥಳಿತಕ್ಕೊಳಗಾದ ಬಾಲಕ ಪ್ರಜ್ಞೆ ತಪ್ಪಿ ಬಿದ್ದಿದ್ದು, ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಿಕ್ಷಕನ ಈ ಕುಕೃತ್ಯಕ್ಕೆ ನೆಟ್ಟಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬಿಹಾರದ ರಾಜಧಾನಿ ಪಾಟ್ನಾದ ಧನರುವಾ ಬ್ಲಾಕ್’ನಲ್ಲಿ ಈ ಘಟನೆ ನಡೆದಿದೆ.

- Advertisement -

ಬಾಲಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಶಿಕ್ಷಕನನ್ನು ಚೋಟು ಎಂದು ಗುರುತಿಸಲಾಗಿದ್ದು, ಸ್ಥಳೀಯರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಬಾಲಕನಿಗೆ ಹಲ್ಲೆ ನಡೆಸಿದ ಶಿಕ್ಷಕ ಚೋಟು ಎಂಬಾತನು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾನೆ ಎಂದು ಕೋಚಿಂಗ್ ಸೆಂಟರ್ ಮಾಲಕ ಅಮರಕಾಂತ್ ಕುಮಾರ್ ತಿಳಿಸಿದ್ದಾರೆ.

Join Whatsapp