ಖಾಸಗಿ ಶಾಲಾ ವಿದ್ಯಾರ್ಥಿನಿಯರಿಗೆ ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಿ ಎಸೆಸೆಲ್ಸಿ ಪರೀಕ್ಷೆ ಬರೆಯಲು ಅವಕಾಶ: ದ.ಕ.ಡಿಸಿ ಡಾ.ರಾಜೇಂದ್ರ

Prasthutha|

ಮಂಗಳೂರು: ಸೋಮವಾರ (ಮಾರ್ಚ್ 28)ದಿಂದ ರಾಜ್ಯದಾದ್ಯಂತ SSLC ಅಂತಿಮ ಪರೀಕ್ಷೆ ನಡೆಯಲಿದ್ದು, ಹಿಜಾಬ್ ವಿಚಾರವಾಗಿ ಉಂಟಾಗಿದ್ದ ಗೊಂದಲಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ತೆರೆ ಎಳೆದಿದೆ.

- Advertisement -

ಯಾವುದೇ ಕಾರಣಕ್ಕೂ ವಿದ್ಯಾರ್ಥಿನಿಯರು ಹಿಜಾಬ್ ವಿಚಾರದಲ್ಲಿ ಗೊಂದಲಕ್ಕೀಡಾಗಬಾರದು. ಈಗಾಗಲೇ ಯಾವೆಲ್ಲ ಖಾಸಗಿ ಶಾಲೆಗಳಲ್ಲಿ ಹಿಜಾಬ್ ಸಹಿತ ಸಮವಸ್ತ್ರಕ್ಕೆ ಅವಕಾಶವಿದೆಯೋ ಅಂತಹ ವಿದ್ಯಾರ್ಥಿಗಳಿಗಷ್ಟೇ ನಾಳಿನ ಪರೀಕ್ಷೆಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿರುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ|ಕೆ.ವಿ. ರಾಜೇಂದ್ರ ಸ್ಪಷ್ಟಪಡಿಸಿದ್ದಾರೆ.‌

ಇನ್ನುಳಿದಂತೆ ಸರಕಾರಿ ಶಾಲೆಗಳು ಕಡ್ಡಾಯವಾಗಿ ಸಮವಸ್ತ್ರ ನಿಯಮವನ್ನು ಪಾಲಿಸಬೇಕಿದೆ. ಅಲ್ಲದೇ, ಹಿಜಾಬ್ ಸಹಿತ ಸಮವಸ್ತ್ರ ಹೊಂದಿರದ ಖಾಸಗಿ ಶಾಲೆ ವಿದ್ಯಾರ್ಥಿನಿಯರು ಕೂಡಾ ಹಿಜಾಬ್ ಧರಿಸದೇ ಸಮವಸ್ತ್ರ ಧರಿಸಿ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ.

- Advertisement -

ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಹಿಜಾಬ್ ಸಮವಸ್ತ್ರವನ್ನಾಗಿಸಿಕೊಂಡ ಶಾಲೆಗಳ ಮಾಹಿತಿಯನ್ನು ಪಡೆದುಕೊಳ್ಳಲಾಗಿದ್ದು, ಅಂತಹ ಶಾಲೆಗಳ ವಿದ್ಯಾರ್ಥಿಗಳು ಹಾಜರಾಗುವ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೆ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಯವರು ಸ್ಪಷ್ಟಪಡಿಸಿದ್ದಾರೆ.‌

ಹಿಜಾಬ್ ಸಹಿತ ಸಮವಸ್ತ್ರವನ್ನು ಬಹುತೇಕ ಮುಸ್ಲಿಂ ಆಡಳಿತದ ಖಾಸಗಿ ಶಾಲೆಗಳಷ್ಟೇ ಹೊಂದಿರುವುದು ಗಮನಾರ್ಹ.

Join Whatsapp