ಬಾಲಕಿಗೆ ಲೈಂಗಿಕ ಕಿರುಕುಳ: ಖಾಸಗಿ ಶಾಲೆಯ ಪ್ರಾಂಶುಪಾಲರ ಬಂಧನ

Prasthutha|

Principal of private school arrested for sexually harassing girlಲಕ್ನೋ: 11ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಖಾಸಗಿ ಶಾಲೆಯ ಪ್ರಾಂಶುಪಾಲರನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಅಮೇಥಿಯಲ್ಲಿ ನಡೆದಿದೆ.

- Advertisement -

ಪ್ರಾಂಶುಪಾಲರು ರಜಾದಿನವಾಗಿದ್ದರೂ ಒಂದು ಫಾರ್ಮ್ ಅನ್ನು ಭರ್ತಿ ಮಾಡಬೇಕು ಎಂದು ಹೇಳಿ ಬೆಳಿಗ್ಗೆ ಕರೆ ಮಾಡಿ ಕರೆದಿದ್ದರಿಂದ, ತನ್ನ ಆಧಾರ್ ಕಾರ್ಡ್ ನೊಂದಿಗೆ ಶಾಲೆಗೆ ಬಂದ ಸಂದರ್ಭದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ತಿಳಿದು ಬಂದಿದೆ.

ಪ್ರಾಂಶುಪಾಲರು ಶಾಲೆಯಲ್ಲಿ ತನಗೆ ಕಿರುಕುಳ ನೀಡಿದ್ದಾರೆ ಎಂದು ಬಾಲಕಿ ನಂತರ ತನ್ನ ಪೋಷಕರಿಗೆ ದೂರು ನೀಡಿದ್ದಳು.

- Advertisement -

  ದೂರಿನ ಆಧಾರದ ಮೇಲೆ, ಪ್ರಾಂಶುಪಾಲರನ್ನು ಬಂಧಿಸಿ, ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮುಸಫಿರ್ಖಾನಾ ಪೊಲೀಸ್ ಠಾಣೆಯ ಎಸ್ ಎಚ್ ಒ ಅಮರ್ ಸಿಂಗ್ ತಿಳಿಸಿದ್ದಾರೆ.

Join Whatsapp