ಅಮ್ರೋಹ: ಶಾಲೆಗೆ ಮಾಂಸಾಹಾರ ತಂದಿದ್ದ ಏಳು ವರ್ಷದ ಬಾಲಕನನ್ನು ಶಾಲೆಯಿಂದ ಉಚ್ಚಾಟಿಸಿರುವ ಘಟನೆ ಅಮ್ರೋಹದಲ್ಲಿ ನಡೆದಿದೆ.
ಅಮ್ರೋಹಾದ ಪ್ರತಿಷ್ಠಿತ ಶಾಲೆಯೊಂದರ 3 ನೇ ತರಗತಿಯ ವಿದ್ಯಾರ್ಥಿಯು ಟಿಫಿನ್ ಬಾಕ್ಸ್ ನಲ್ಲಿ ಮಾಂಸಾಹಾರ ತಂದಿದ್ದಾನೆ. ಇದನ್ನು ನೋಡಿದ ಪ್ರಾಂಶುಪಾಲ ಆ ವಿದ್ಯಾರ್ಥಿಯನ್ನು ಹೊರಹಾಕಿದ್ದಾರೆ.
ಶಾಲೆಯ ಪ್ರಾಂಶುಪಾಲ ಅವನೀಶ್ ಶರ್ಮಾ ಹಾಗೂ ಬಾಲಕನ ತಾಯಿ ಸಬ್ರಾ ಸೈಫಿ ನಡುವಿನ ಮಾತುಕತೆಯ ವಿಡಿಯೊ ಸಾಮಾಜಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಮುಸ್ಲಿಂ ಧರ್ಮದವರೆಂದು ಈ ರೀತಿ ಮಾಡಿದ್ದೀರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೊತೆಗೆ ಶಾಲೆಗೆ ಮಾಂಸಾಹಾರ ತರುವ ವಿದ್ಯಾರ್ಥಿಗಳಿಗೆ ಇಲ್ಲಿ ಶಿಕ್ಷಣ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಆ ವಿಡಿಯೊದಲ್ಲಿ ಬಾಲಕನ ಉಚ್ಚಾಟನೆಯನ್ನು ಸಮರ್ಥಿಸಿಕೊಂಡಿರುವ ಅವನೀಶ್ ಶರ್ಮಾ, “ಬಾಲಕನು ದೇವಾಲಯಗಳನ್ನು ಧ್ವಂಸಗೊಳಿಸುವ, ಹಿಂದೂಗಳನ್ನು ಹತ್ಯೆಗೈಯ್ಯುವ ಹಾಗೂ ರಾಮಮಂದಿರವನ್ನು ನಾಶಗೊಳಿಸುವ ಮಾತುಗಳನ್ನಾಡುತ್ತಿದ್ದಾನೆ. ಇಂತಹ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು ನಮ್ಮಿಂದ ಸಾಧ್ಯವಿಲ್ಲ” ಎಂದು ಹೇಳಿಕೆ ನೀಡಿರುವುದು ಸೆರೆಯಾಗಿದೆ.
ನನ್ನ ಪುತ್ರ ದ್ವೇಷದ ಬಲಿಪಶುವಾಗಿದ್ದು, ಆತನನ್ನು ಹಲವಾರು ಗಂಟೆಗಳ ಕಾಲ ಶಾಲೆಯ ಕೋಣೆಯೊಂದರಲ್ಲಿ ಕೂಡಿ ಹಾಕಲಾಗಿತ್ತು ಎಂದು ಆರೋಪಿಸಿದ್ದಾರೆ. ಕಳೆದ ಮೂರು ತಿಂಗಳಿನಿಂದ ಶಾಲೆಯಲ್ಲಿ ವಿದ್ಯಾರ್ಥಿಗಳ ನಡುವೆ ಹಿಂದೂ-ಮುಸ್ಲಿಂ ಚರ್ಚೆ ನಡೆಯುತ್ತಿದೆ ಎಂದು ತನ್ನ ಪುತ್ರ ನನಗೆ ಹೇಳಿದ್ದ ಎಂದೂ ಆ ಮಹಿಳೆ ಆರೋಪಿಸಿದ್ದಾರೆ.