ಮಧ್ಯ ಪ್ರಾಚ್ಯ: ‘ಯುದ್ಧ ಕ್ಯಾಬಿನೆಟ್’ ವಿಸರ್ಜಿಸಿದ ಇಸ್ರೇಲ್

Prasthutha|

ಟೆಲ್‌ ಅವಿವ್‌: ಪ್ಯಾಲೆಸ್ತೀನ್ ಮೇಲೆ ಯುದ್ಧ ನಡೆಸಿಕೊಂಡು ಹೋಗುವ ಜವಾಬ್ದಾರಿಯೊಂದಿಗೆ ರಚಿಸಲಾಗಿದ್ದ ‘ಯುದ್ಧ ಕ್ಯಾಬಿನೆಟ್‌’ ಎಂಬ ಸಮಿತಿಯನ್ನು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ವಿಸರ್ಜಿಸಿದ್ದಾರೆ.

- Advertisement -

ಹಮಾಸ್ ಮತ್ತು ಹಿಜ್ಬುಲ್ಲಾ ವಿರುದ್ಧ ನಡೆಯುತ್ತಿರುವ ಯುದ್ಧಗಳನ್ನು ನಿರ್ವಹಿಸಲು ಅಕ್ಟೋಬರ್ 11 ರಂದು ಆರು ಸದಸ್ಯರ ಯುದ್ಧ ಕ್ಯಾಬಿನೆಟ್ ಎಂಬ ಸಮಿತಿಯನ್ನು ರಚಿಸಲಾಗಿತ್ತು.

ಯುದ್ಧದ ಆರಂಭಿಕ ದಿನಗಳಲ್ಲಿ ದೇಶವನ್ನು ಬೆಂಬಲಿಸುವ ಸಲುವಾಗಿ ರಚಿಸಲಾಗಿದ್ದ ಈ ಸಮಿತಿಯನ್ನು ಸೇರಿಕೊಂಡಿದ್ದ ವಿಪಕ್ಷ ಸಂಸದ ಬೆನ್ನಿ ಗ್ಯಾಂಟ್ಜ್‌ ಸಮಿತಿಯಿಂದ ಹಿಂದೆ ಸರಿದ ಬಳಿಕ ಅದನ್ನು ವಿಸರ್ಜನೆ ಮಾಡಲಾಗಿದೆ ಎನ್ನಲಾಗಿದೆ.

- Advertisement -

ಈ ಮಧ್ಯೆ ಮಾನವೀಯ ನೆರವು ಪರಿಶೀಲಿಸಲು ಇಸ್ರೇಲ್‌ ಸೇನೆಯು ಭಾನುವಾರ ಯುದ್ಧ ವಿರಾಮವನ್ನು ಘೋಷಿಸಿದ ಹೊರತಾಗಿಯೂ ರಫಾ ಮತ್ತು ದಕ್ಷಿಣ ಗಾಜಾದ ಮೇಲೆ ಅದರ ದಾಳಿ ಮುಂದುವರಿದಿದೆ ಎಂದು ಯುಎನ್‌ಆರ್‌ಡಬ್ಲ್ಯುಎ ಮುಖ್ಯಸ್ಥ ಫಿಲಿಪ್‌ ಲಾಝಾರಿನಿ ಕಿಡಿಗಾರಿದ್ದಾರೆ.



Join Whatsapp