ಮೈಸೂರು: ವಿಶ್ವ ಯೋಗದಿನಾಚರಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. 6.30ರಿಂದ 7.45ರ ವರೆಗೂ ಯೋಗಭ್ಯಾಸ ನಡೆಸಿದ ಮೋದಿ, ನಮೋ ಎಕ್ಸಿಬಿಷನ್ ಉದ್ಘಾಟಿಸಿದ ಬಳಿಕ ನೇರವಾಗಿ ಮೈಸೂರು ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ತೆರಳಲಿದ್ದಾರೆ.
ಎರಡು ದಿವಸಗಳ ಮೈಸೂರು ಬೆಂಗಳೂರು ಪ್ರವಾಸದಲ್ಲಿರುವ ಮೋದಿ ಇಂದು ದೆಹಲಿಗೆ ಮರಳಲಿದ್ದಾರೆ.