ಕೋಲ್ಕತ್ತಾ: ಮಮತಾ ಬ್ಯಾನರ್ಜಿಯವರು ಪ್ರಧಾನಿಯಾಗುವ ಎಲ್ಲಾ ಅರ್ಹತೆಯನ್ನು ಹೊಂದಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಸೌಗತ ರಾಯ್ ಹೇಳಿದ್ದಾರೆ.
ಜೂನ್ 4 ರಂದು ಜನಾದೇಶ ಸಿಗಲಿದೆ. ಮಮತಾ ಅವರು 30ಕ್ಕೂ ಹೆಚ್ಚು ಸಂಸದರನ್ನು ಹೊಂದಿರುತ್ತಾರೆ. ಅವರು ಪ್ರಧಾನಿಯಾಗುವ ಎಲ್ಲಾ ಅರ್ಹತೆ ಹೊಂದಿದ್ದಾರೆ. ಇದು 3 ಅವಧಿಗೆ ಮುಖ್ಯಮಂತ್ರಿಯಾಗಿ ಸಾಬೀತಾಗಿದೆ ಎಂದು ಸೌಗತ ರಾಯ್ ಹೇಳಿದರು.
ಬಿಜೆಪಿಗೆ ಅಭ್ಯರ್ಥಿಗಳು ಸಿಗಲಿಲ್ಲ, ಹೀಗಾಗಿ ಅವರು ಎಸ್ ಎಸ್ ಅಹ್ಲುವಾಲಿಯಾ ಅವರನ್ನು ಕಣಕ್ಕಿಳಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.