ಬಂಟ್ವಾಳ | ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಮಾಡುತ್ತಿದ್ದ ಪುರೋಹಿತನ ಬಂಧನ

Prasthutha|

ಬಂಟ್ವಾಳ: ಪುರೋಹಿತನೋರ್ವ ತನ್ನ ಮಗಳ ಮೇಲೆಯೇ ಅತ್ಯಾಚಾರ ನಡೆಸಿ ಗರ್ಭವತಿಯನ್ನಾಗಿಸಿದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತುಂಬೆಯಲ್ಲಿ ನಡೆದಿದೆ.

- Advertisement -


ನೀಚ ಕೃತ್ಯ ನಡೆಸಿದ ಪುರೋಹಿತನನ್ನು ತುಂಬೆ ನಿವಾಸಿ ವೆಂಕಟೇಶ ಕಾರಂತ ಎಂದು ಗುರುತಿಸಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ.


ಬಾಲಕಿಯ ತಂದೆ ಅಪಘಾತದಲ್ಲಿ ಮರಣ ಹೊಂದಿದ ನಂತರ ಬಾಲಕಿಯ ತಾಯಿ ಎರಡನೇ ಮದುವೆಯಾಗಿದ್ದು, ಮಲತಂದೆ ಬಾಲಕಿಯ ಪಾಲಿಗೆ ದುಸ್ವಪ್ನವಾಗಿ ಕಾಡಿದ್ದಾನೆ. ಬಾಲಕಿ ತಾಯಿ ಮತ್ತು ಮಲತಂದೆಯ ಜೊತೆಯಲ್ಲೇ ವಾಸವಾಗಿದ್ದಳು. ವೆಂಕಟೇಶ ಕಾರಂತ ತನ್ನಾಶ್ರಯದಲ್ಲಿದ್ದ ಅಪ್ರಾಪ್ತ ವಯಸ್ಸಿನ ಸಾಕುಮಗಳ ಮೇಲೆ ಕಳೆದ 4 ತಿಂಗಳಿನಿಂದ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.



Join Whatsapp