ಮಂಗಳೂರು| ಸಿಟಿ ಗೋಲ್ಡ್& ಡೈಮಂಡ್ಸ್ ನಲ್ಲಿ ‘ಪ್ರೈಡ್ ಬ್ರೈಡ್ ಡೈಮಂಡ್ ಫೆಸ್ಟಿವಲ್’ಗೆ ಚಾಲನೆ

Prasthutha|

ಜೂನ್ 5ರ ವರೆಗೆ ವಿವಿಧ ಆಫರ್, ಬಹುಮಾನ ಗೆಲ್ಲುವ ಅವಕಾಶ!

- Advertisement -

ಮಂಗಳೂರು: ಉತ್ಕೃಷ್ಟ ವಿನ್ಯಾಸದ ವಜ್ರಾಭರಣಗಳಿಗೆ ಹೆಸರಾದ ಸಿಟಿ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನ ವಜ್ರಾಭರಣಗಳ ಹಬ್ಬ ‘ಪ್ರೈಡ್ ಬ್ರೈಡ್ ಡೈಮಂಡ್ ಫೆಸ್ಟಿವಲ್’  ಕಾರ್ಯಕ್ರಮಕ್ಕೆ ಮಂಗಳೂರಿನ ಕಂಕನಾಡಿ ಶಾಖೆಯಲ್ಲಿ ಚಾಲನೆ ನೀಡಲಾಯಿತು.

‘ಪ್ರೈಡ್ ಬ್ರೈಡ್ ಡೈಮಂಡ್ ಫೆಸ್ಟಿವಲ್’ ಇದನ್ನು ಗ್ರಾಹಕರ ಸಮ್ಮುಖದಲ್ಲಿ ವಿಧಾನಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಉದ್ಘಾಟಿಸಿದರು.

- Advertisement -

ಬಳಿಕ ‘ವೆಡ್ಡಿಂಗ್ ವಿಂಟೇಜ್ ಪ್ರೀಮಿಯಂ ಆ್ಯಂಟಿಕ್ ಕಲೆಕ್ಷನ್’ ನನ್ನು ಬಿ-ಹ್ಯೂಮನ್ ಸಂಸ್ಥೆಯ ಸ್ಥಾಪಕಾಧ್ಯಕ್ಷ ಆಸಿಫ್ ಡೀಲ್ಸ್ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭ ಬಿ.ಎಂ‌. ಫಾರೂಕ್ ಮಾತನಾಡಿ, ” ಸಿಟಿ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯ ಅತ್ಯುತ್ತಮ ಗುಣಮಟ್ಟದ ಸೇವೆಯೇ ಆ ಸಂಸ್ಥೆಯ ಹೆಮ್ಮೆಯಾಗಿದೆ. ಹಾಗಾಗಿ ಗ್ರಾಹಕರಿಗೆ ಬೇಕಾದ ಅಸಾಧಾರಣ ಸಂಗ್ರಹವನ್ನು ಕಾಣಬಹುದಾಗಿದೆ. ಉತ್ಕೃಷ್ಟ ದರ್ಜೆಯ ಆಭರಣಗಳನ್ನು ಒದಗಿಸುತ್ತಿರುವ ಆಭರಣ ಮಳಿಗೆಗಳಲ್ಲಿ ಈ ಸಂಸ್ಥೆಯೂ ಒಂದು. ಗ್ರಾಹಕರ ಪ್ರೀತಿಗೆ ಪಾತ್ರವಾಗಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ” ಎಂದು ಶುಭಹಾರೈಸಿದರು.

‘ಪ್ರೈಡ್ ಬ್ರೈಡ್ ಡೈಮಂಡ್ ಫೆಸ್ಟಿವಲ್’ ನ ಮೊದಲ ಗ್ರಾಹಕಿ ಅಮ್ರಾ ಇವರಿಗೆ ಅತಿಥಿಗಳ ಸಮ್ಮುಖದಲ್ಲಿ ವಜ್ರಾಭರಣವನ್ನು ಹಸ್ತಾಂತರಿಸಲಾಯಿತು.

ಇನ್ನು ಪ್ರಮುಖ ಅತಿಥಿಯಾಗಿ ಆಗಮಿಸಿದ್ದ ಸಿಮೆಂಟ್ ಸೇಲ್ಸ್ ಕಾರ್ಪೊರೇಶನ್ ಮಂಗಳೂರು ಈ ಸಂಸ್ಥೆಯ ಡಾ.ಅಫ್ರಾ ಅಬ್ದುಲ್ ರಹ್ಮಾನ್ ವಜ್ರಾಭರಣ ತೊಟ್ಟು ಸೆಲ್ಫಿ ಫೋಟೋ ಕ್ಲಿಕ್ಕಿಸುವ ಮೂಲಕ ‘ಪ್ರೈಡ್ ಬ್ರೈಡ್ ಸ್ಟಾರ್’ ಸೆಲ್ಫೀ ಫೋಟೋ ಸ್ಫರ್ಧೆಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಸಿಮೆಂಟ್ ಸೇಲ್ಸ್ ಕಾರ್ಪೊರೇಶನ್ ಮಂಗಳೂರು ಸಂಸ್ಥೆಯ ಸಫಿಯಾ ಮೊಹಮ್ಮದ್, ಬ್ರಾಂಚ್ ಮ್ಯಾನೇಜರ್ ಅಹ್ಮದ್ ಹಫೀಝ್, ಮಾರ್ಕೆಟಿಂಗ್ ಮ್ಯಾನೇಜರ್ ಇಮ್ರಾನ್ ವಿ‌. ಉಪಸ್ಥಿತರಿದ್ದರು‌. ನಿರೂಪಕ ಸಾಹಿಲ್ ಝಹೀರ್ ಕಾರ್ಯಕ್ರಮ ನಿರ್ವಹಿಸಿದರು.

ಮೇ 20ರಿಂದ ಆರಂಭವಾಗಿ ಜೂನ್ 5ರ ವರೆಗೆ ನಡೆಯಲಿರುವ ‘ಪ್ರೈಡ್ ಬ್ರೈಡ್ ಡೈಮಂಡ್ ಫೆಸ್ಟಿವಲ್’ ಅಂಗವಾಗಿ ವಿವಿಧ ರಿಯಾಯಿತಿ, ಆಫರ್ ಹಾಗೂ ಆಕರ್ಷಕ ಸ್ಪರ್ಧೆಗಳನ್ನು ಕಂಕನಾಡಿಯ ಮಳಿಗೆಯಲ್ಲಿ ಏರ್ಪಡಿಸಿದೆ.

ವಜ್ರಾಭರಣಗಳಿಗೆ ಸಂಬಂಧಿತ ಉಚಿತ ಸೇವೆ, ಪ್ರತಿ ಅನ್ ಕಟ್ ಡೈಮಂಡ್ ಮೇಲೆ ಶೇ. 30 ಹಾಗೂ ಪ್ರತಿ ಕ್ಯಾರೆಟ್ ವಜ್ರಾಭರಣದ ಮೇಲೆ ₹20 ಸಾವಿರ ರಿಯಾಯಿತಿ, ಪ್ರೀಸೆಸ್ ನೆಕ್ಲೆಸ್ ಮೇಲೆ ‘ನೋ ಮೇಕಿಂಗ್ ಚಾರ್ಜ್’, ಹಳೆಯ ವಜ್ರಾಭರಣಗಳ ಬದಲಾವಣೆ ಹಾಗೂ ಇನ್ನೂ ಹಲವು ರೀತಿಯ ಆಫರ್ ಗಳನ್ನು ಕಲ್ಪಿಸಲಾಗಿದೆ‌.

ವೆಡ್ಡಿಂಗ್ ಕಲೆಕ್ಷನ್ ಗಳ ವಜ್ರಾಭರಣಗಳನ್ನು ಧರಿಸಿ ಸೆಲ್ಫೀ ಫೋಟೋ ಕ್ಲಿಕ್ಕಿಸಿ ‘ಸಿಟಿ ಗೋಲ್ಡ್’ ಇನ್ ಸ್ಟಾಗ್ರಾಮ್ ಖಾತೆಗೆ ಟ್ಯಾಗ್ ಮಾಡುವ ಮೂಲಕ ಅತೀ ಹೆಚ್ಚು ಲೈಕ್ ಪಡೆಯುವವರು ‘ಪ್ರೈಡ್ ಬ್ರೈಡ್ ಸ್ಟಾರ್’ ಹಾಗೂ ‘ಪ್ರೈಡ್ ಬ್ರೈಡ್ ಡೈಮಂಡ್ ಸ್ಟಾರ್’ ಆಗುವ ಮೂಲಕ ಭಾರೀ ಬಹುಮಾನಗಳನ್ನು ಪಡೆಯಬಹುದಾಗಿದೆ.

Join Whatsapp