ಏ.1ರಿಂದ 800ಕ್ಕೂ ಅಧಿಕ ಔಷಧಗಳ ಬೆಲೆ ಏರಿಕೆ !

Prasthutha|

ನವದೆಹಲಿ: ಏಪ್ರಿಲ್ 1ರಿಂದ ಸೋಂಕು ಹಾಗೂ ನೋವು ನಿವಾರಕಗಳು ಸೇರಿದಂತೆ ಸುಮಾರು 800 ಅಗತ್ಯ ಔಷಧಿಗಳ ಬೆಲೆ ಶೇ 10.7ರಷ್ಟು ಬೆಲೆ ಹೆಚ್ಚಳ ಮಾಡಲು ರಾಷ್ಟ್ರೀಯ ಔಷಧಿ ಬೆಲೆ ಪ್ರಾಧಿಕಾರ (ಎನ್ಪಿಪಿಎ) ನಿರ್ಧರಿಸಿದೆ .

- Advertisement -

ಸೋಂಕು, ಜ್ವರ, ಚರ್ಮ ರೋಗ, ಹೃದ್ರೋಗ, ರಕ್ತಹೀನತೆ, ಅಧಿಕ ರಕ್ತದೊತ್ತಡವನ್ನು ಗುಣಪಡಿಸಲು ಬಳಸುವ ಔಷಧಿಗಳ ಬೆಲೆಗಳು ಹೆಚ್ಚಾಗಲಿವೆ.

ಬೆಲೆ ಏರಿಕೆಯಾಗುವ ಔಷಧಗಳ ಪಟ್ಟಿಯಲ್ಲಿ, ಅಜಿಥ್ರೊಮೈಸಿನ್, ಹೈಡ್ರೊಕ್ಲೊರೈಡ್, ಪ್ಯಾರಸಿಟಮಾಲ್, ಫೆನೊಬಾರ್ಬಿಟೊನ್ ಮತ್ತು ಫೆನಿಟೊಯಿನ್ ಸೋಡಿಯಂನಂತಹ ಔಷಧಗಳೂ ಸೇರಿವೆ.

Join Whatsapp