ಬೆಲೆ ಏರಿಕೆ, ನಿರುದ್ಯೋಗ ಅತ್ಯಂತ ಗಂಭೀರ ಸಮಸ್ಯೆ: ಆರ್.ವಿ. ದೇಶಪಾಂಡೆ

Prasthutha|

- Advertisement -

ಬೆಂಗಳೂರು; ದೇಶದಲ್ಲಿ ನಿರುದ್ಯೋಗ ಮತ್ತು ಬೆಲೆ ಏರಿಕೆ ಅತ್ಯಂತ ಗಂಭೀರ ವಿಚಾರವಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಉದ್ಯಮ ವಲಯವನ್ನು ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಮಾಜಿ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.

ಕೇಂದ್ರದ ಎಂ.ಎಸ್.ಎಂ.ಇ ಹಾಗೂ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕೆ ಮಹಾ ಸಂಸ್ಥೆ ಸಹಯೋಗದಲ್ಲಿ ರಾಷ್ಟ್ರಮಟ್ಟದ ಎಂ.ಎಸ್.ಎಂ.ಇ.ಸಿ.ಸಿ.ಐ ಪ್ರಶಸ್ತಿ ಪಡೆದ ಭಾರತದ ಜನಪ್ರಿಯ ಅಗರಬತ್ತಿ ಬ್ರ್ಯಾಂಡ್ ನ ಶ್ರೀನಿವಾಸ ಸುಗಂಧಾಲಯ “ಸತ್ಯಾ” ಸಂಸ್ಥೆಯ ಮುಖ್ಯಸ್ಥ ಕೆ.ಎಸ್. ನಾಗರಾಜಶೆಟ್ಟಿ ಅವರನ್ನು ಸನ್ಮಾನಿಸಿ, ಸತ್ಯಾ ಗಜಕೇಸರಿ, ಸತ್ಯಾ ಪ್ಯಾರಡೇಸ್ ಅಗರಬತ್ತಿ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ನಿರುದ್ಯೋಗ ಹೆಚ್ಚಾಗುತ್ತಿದ್ದು, ಬೆಲೆ ಏರಿಕೆಯಾಗುತ್ತಿದೆ. ಇದರಿಂದ ಪ್ರತಿಯೊಂದು ವಲಯದಲ್ಲೂ ತೊಂದರೆ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಉದ್ಯಮಿಗಳನ್ನು ನಾವು ಪ್ರೋತ್ಸಾಹಿಸಬೇಕು. ಉದ್ಯಮಿಯನ್ನು ದೇವರೇ ಕಳುಹಿಸಿದ ವ್ಯಕ್ತಿಯಾಗಿದ್ದಾನೆ. ಉದ್ಯಮಿ ಲಾಭ, ನಷ್ಟ, ನೋಡುತ್ತಾನೆ. ರಾಜ್ಯಕ್ಕೆ ತೆರಿಗೆ ತಂದು ಕೊಡುತ್ತಾನೆ. ಇಂತಹ ವ್ಯಕ್ತಿ ಉಳಿದರೆ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂದರು.

- Advertisement -

ಇಂದು ಕರ್ನಾಟಕ ಹಲವು ವಲಯಗಳಲ್ಲಿ ನಾಯಕನಾಗಿ ಹೊರ ಹೊಮ್ಮಿದ್ದು, ದೇಶದಲ್ಲಿಯೇ ಮೊದಲ ಐಟಿ, ಎಲೆಕ್ಟ್ರಾನಿಕ್ ವಾಹನಗಳ ನೀತಿ, ಮೊದಲ ನವೋದ್ಯಮ ನೀತಿಯನ್ನು ಜಾರಿಗೆ ತಂದ ಹೆಗ್ಗಳಿಕೆ ನಮ್ಮದಾಗಿದೆ. ಕೈಗಾರಿಕಾ ನೀತಿಗಳಲ್ಲಿ ಬದಲಾವಣೆ ತರಲಾಗಿದೆ ಎಂದು ಹೇಳಿದರು.

Join Whatsapp