ಗೃಹರಕ್ಷಕ, ಅಗ್ನಿಶಾಮಕ ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರದಾನ

Prasthutha|

ಬೆಂಗಳೂರು: ದೇಶದ ಭದ್ರತೆ, ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ನಿರಂತರವಾಗಿ ತೊಡಗಿರುವ ಗೃಹರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ಎಸ್ ಡಿಆರ್ ಎಫ್ ಇಲಾಖೆಯ ಯೋಧರು ಮತ್ತು ಅಧಿಕಾರಿಗಳು ಇಂದಿನ ಯುವಪೀಳಿಗೆಗೆ ಸ್ಫೂರ್ತಿ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.

- Advertisement -

ರಾಜಭವನದ ಗಾಜಿನಮನೆಯಲ್ಲಿ ಆಯೋಜಿಸಲಾಗಿದ್ದ ಪದಕ ಪ್ರದಾನ ಸಮಾರಂಭದಲ್ಲಿ ಗೃಹರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಅಧಿಕಾರಿ ಸಿಬ್ಬಂದಿಗಳಿಗೆ ರಾಷ್ಟ್ರಪತಿ ಪದಕ ಪ್ರದಾನ ಮಾಡಿ ಮಾತನಾಡಿದರು.

ದೇಶದ ಭದ್ರತೆ, ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಮತ್ತು ನೈಸರ್ಗಿಕ ಮತ್ತು ಮಾನವೀಯತೆಯಿಂದ ಜನರಿಗೆ ಸೇವೆ ಸಲ್ಲಿಸುವ ಇವರುಗಳ ಕಾರ್ಯ ಪ್ರಶಂಸನೀಯ ಎಂದರು.
ತ್ಯಾಗ ಮತ್ತು ಸಮರ್ಪಣಾ ಭಾವದ ಕಷ್ಟದ ಪರಿಸ್ಥಿತಿಯಲ್ಲಿ ದೇಶವಾಸಿಗಳ ರಕ್ಷಣೆಗಾಗಿ ಹಾಗೂ ಮತ್ತು ಅವರ ಜೀವ ಮತ್ತು ಆಸ್ತಿಯನ್ನು ರಕ್ಷಿಸುವಲ್ಲಿ ಇವರ ವಿಶಿಷ್ಟ ಸೇವೆಗಳಿಗಾಗಿ ಗೃಹರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ಎಸ್‍ ಡಿಆರ್‍ ಎಫ್ ನ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ” ರಾಷ್ಟ್ರಪತಿ ಪದಕ”ವನ್ನು ಪ್ರದಾನ ಮಾಡಿರುವುದು ಸಂತಸ ತಂದಿದೆ. ಇವರ ಅದಮ್ಯ ಧೈರ್ಯ, ಸಂಕಲ್ಪ, ಮತ್ತು ತ್ಯಾಗ ಶ್ಲಾಘನೀಯ. ಉತ್ಕøಷ್ಟತೆಯ ಎತ್ತರವನ್ನು ಸಾಧಿಸಲು ಇವರ ಕಾರ್ಯಗಳು ಎಲ್ಲರಿಗೂ ಮಾದರಿಯಾಗುತ್ತವೆ ಎಂದು ತಿಳಿಸಿದರು.

- Advertisement -

ಕೋವಿಡ್, ಪ್ರವಾಹ, ಕಟ್ಟಡಗಳಲ್ಲಿ ಬೆಂಕಿ, ರಸ್ತೆ, ರೈಲು ಮತ್ತು ವಾಯು ಅಪಘಾತಗಳು ಮತ್ತು ನೈಸರ್ಗಿಕ ವಿಕೋಪಗಳು – ಭೂಕಂಪ ಮತ್ತು ಭೂಕುಸಿತ ಮುಂತಾದ ಸಂದರ್ಭಗಳಲ್ಲಿ ಡಿಜಿಪಿ ಡಾ. ಅಮರ್ ಕುಮಾರ್ ಪಾಂಡೆ ನೇತೃತ್ವದಲ್ಲಿ ನಾಗರಿಕ ರಕ್ಷಣಾ ಇಲಾಖೆಯು ಅತ್ಯುತ್ತಮ ಸಾಧನೆ ಮಾಡಿದೆ ಎಂದು ತಿಳಿಸಿದರು.

ಅಗ್ನಿಶಾಮಕ ಸೇವೆಗಳು, ಸಿವಿಲ್ ಡಿಫೆನ್ಸ್ ಮತ್ತು ಹೋಮ್ ಗಾರ್ಡ್ಗರಳು ಯಾವುದೇ ರೀತಿಯ ಅಪಘಾತ ಅಥವಾ ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸಮುದಾಯದ ಸುರಕ್ಷತೆಗೆ ಪ್ರಾಥಮಿಕವಾಗಿ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ಮತ್ತು ಸಂವಹನಗಳನ್ನು ಒದಗಿಸಲು ಪ್ರತಿಸ್ಪಂದಕರಾಗಿ ಕೆಲಸ ನಿರ್ವಹಿಸುತ್ತಾರೆ ವಿಪತ್ತು ನಿರ್ವಹಣೆಗಾಗಿ ಸಾರ್ವಜನಿಕ ಜಾಗೃತಿ ಮತ್ತು ಸಮುದಾಯದ ಸಾಮಥ್ರ್ಯವನ್ನು ನಿರ್ಮಿಸಲು ಈ ಸಂಸ್ಥೆಗಳು ಮಾಡುತ್ತಿರುವ ಕೆಲಸ ಶ್ಲಾಘನೀಯ ಎಂದು ಪ್ರಶಂಸಿದರು.

ಹವಾಮಾನ ಬದಲಾವಣೆಯಿಂದಾಗಿ, ಪ್ರವಾಹಗಳು, ಬರಗಳು, ಶಾಖದ ಅಲೆಗಳು ಮತ್ತು ಚಂಡಮಾರುತಗಳಂತಹ ಪರಿಸ್ಥಿತಿಗಳು ಸೃಷ್ಟಿಯಾಗುತ್ತಲೇ ಇರುತ್ತವೆ ಎಂಬುದು ಅನೇಕ ಸಂಶೋಧನಾ ಕಾರ್ಯಗಳಿಂದ ಸ್ಪಷ್ಟವಾಗಿದೆ. ಈ ದಿಕ್ಕಿನಲ್ಲಿ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ನೈಸರ್ಗಿಕ ವಿಕೋಪಗಳ ಆವರ್ತನ ಮತ್ತು ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರಿನ ರಾಸಾಯನಿಕ ಕಾರ್ಖಾನೆಯಲ್ಲಿ ಇತ್ತೀಚೆಗೆ ಸಂಭವಿಸಿದ ರಾಸಾಯನಿಕ ಬೆಂಕಿಯ ಸಂದರ್ಭದಲ್ಲಿ, ಅಗ್ನಿಶಾಮಕ ಸೇವೆಗಳು ಜೀವ ಮತ್ತು ಆಸ್ತಿಗಳನ್ನು ಉಳಿಸುವಲ್ಲಿ ಉನ್ನತ ಮಟ್ಟದ ಸಾಮರ್ಥ್ಯವನ್ನು ಪ್ರದರ್ಶಿಸಿದವು, ಇದು ಎಲ್ಲಾ ಹಂತಗಳಲ್ಲಿ ಮೆಚ್ಚುಗೆ ಪಡೆದಿದೆ. ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು ಕರ್ನಾಟಕದ ನಾಗರಿಕ ರಕ್ಷಣಾ ಇಲಾಖೆಯನ್ನು ದೇಶದ ಅತ್ಯುತ್ತಮ ನಾಗರಿಕ ರಕ್ಷಣಾ ಸೇವಾ ಪೂರೈಕೆದಾರ ಎಂದು ಗುರುತಿಸಿದೆ ಎಂದು ಹೇಳಿದರು.

ಗೃಹ ಸಚಿವ ಅರಗ ಜ್ಞಾನೇಂದ್ರ, ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಸ್.ರವಿ, ಆರಕ್ಷಕ ಮಹಾನಿರ್ದೇಶಕರಾದ ಡಾ.ಅಮರ್ ಕುಮಾರ್ ಪಾಂಡೆ, ಎಡಿಜಿಪಿ ಕೆ.ಟಿ.ಬಾಲಕೃಷ್ಣ, ಬೆಂಗಳೂರಿನ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ ಸೇರಿದಂತೆ ಇನ್ನಿತರು ಗಣ್ಯರು ಉಪಸ್ಥಿತರಿದ್ದರು.



Join Whatsapp