ರಾಷ್ಟ್ರಪತಿ ಚುನಾವಣೆ: ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾಗೆ ಟಿಆರ್’ಎಸ್ ಬೆಂಬಲ

Prasthutha|

ತೆಲಂಗಾಣ: ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಯಶವಂತ್ ಸಿನ್ಹಾ’ಗೆ ಟಿಆರ್’ಎಸ್(ತೆಲಂಗಾಣ ರಾಷ್ಟ್ರ ಸಮಿತಿ) ಬೆಂಬಲ ಸೂಚಿಸಿದೆ. ರಾಷ್ಟ್ರಪತಿ ಚುನಾವಣೆಯ ನಾಮನಿರ್ದೇಶನಕ್ಕೆ ಎರಡು ದಿನಗಳ ಮೊದಲು ಈ ಬೆಳವಣಿಗೆ ನಡೆದಿದೆ.

- Advertisement -

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ನೇತೃತ್ವದಲ್ಲಿ ಟಿಆರ್‌ಎಸ್ ಪಕ್ಷವು ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸಿದೆ ಎಂದು ಕ್ಯಾಬಿನೆಟ್ ಸಚಿವ ರಾಮರಾವ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಇಂದು ನಾಮನಿರ್ದೇಶನದಲ್ಲಿ ನಾನು ನಮ್ಮ ಸಂಸತ್ ಸದಸ್ಯರೊಂದಿಗೆ ಟಿಆರ್‌ಎಸ್‍ ಅನ್ನು ಪ್ರತಿನಿಧಿಸುತ್ತೇನೆ ಎಂದು ರಾಮರಾವ್ ತಿಳಿಸಿದ್ದಾರೆ.

ಇಂದು ಯಶವಂತ್ ಸಿನ್ಹಾ ನಾಮಪತ್ರ ಸಲ್ಲಿಸಲಿದ್ದಾರೆ. ಕಳೆದ ವಾರ ಯಶವಂತ್ ಸಿನ್ಹಾ ರನ್ನು ವಿರೋಧ ಪಕ್ಷಗಳ ಒಮ್ಮತದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿತ್ತು. ಈ ಮೊದಲು ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್’ಎಸ್ ಪಕ್ಷವು ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕುರಿತಾಗಿ ಮಮತಾ ಬ್ಯಾನರ್ಜಿ ಕರೆದಿದ್ದ ಸಭೆಯನ್ನು ಬಹಿಷ್ಕರಿಸಿತ್ತು. ಇದೀಗ ಮಹತ್ತರ ಬೆಳವಣಿಗೆಯಲ್ಲಿ ಟಿಆರ್’ಎಸ್ ವಿಪಕ್ಷ ಅಭ್ಯರ್ಥಿಗೆ ಬೆಂಬಲ ಸೂಚಿಸಿದೆ.

Join Whatsapp