ಮಂಗಳೂರು ಆಟೋ ಸ್ಫೋಟ ಪ್ರಕರಣಕ್ಕೂ ಪ್ರೇಮ್’ರಾಜ್’ಗೂ ಸಂಬಂಧವಿಲ್ಲ: ಡಿಜಿಪಿ ಸ್ಪಷ್ಟನೆ

Prasthutha|

ಬೆಂಗಳೂರು: ಮಂಗಳೂರಿನ ಹೊರ ವಲಯದ ಗರೋಡಿಯಲ್ಲಿ ನಡೆದ ಆಟೋ ಸ್ಫೋಟಕ್ಕೂ ಪ್ರೇಮ್’ರಾಜ್’ಗೂ ಯಾವುದೇ ಸಂಬಂಧವಿಲ್ಲವೆಂದು ಡಿಜಿಪಿ ಪ್ರವೀಣ್ ಸೂದ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರೇಮ್’ರಾಜ್ ಎಂಬಾತ ಗುರುತಿನ ದಾಖಲೆ ಕಳ್ಳತನಕ್ಕೊಳಗಾದ ಸಂತ್ರಸ್ತ. ಇದು ದೃಢಪಟ್ಟಿದೆ. ಈ ಘಟನೆಗೂ ಪ್ರೇಮ್ ರಾಜ್ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

- Advertisement -

ಘಟನೆ ಸ್ಥಳದಲ್ಲಿ ಪ್ರೇಮ್’ರಾಜ್ ಹುಟಗಿ ಅವರ ಆಧಾರ್ ಕಾರ್ಡ್ ಪತ್ತೆಯಾಗಿದ್ದು, ಹುಬ್ಬಳ್ಳಿಯ ವಿಳಾಸ ತೋರಿಸುತ್ತಿದ್ದವು. ಈ ಹೆಸರಿನ ವ್ಯಕ್ತಿ ಮೈಸೂರಿನಲ್ಲಿ ಬಾಡಿಗೆ ಕೊಠಡಿ ಪಡೆದಿದ್ದ ಎಂಬ ಮಾಹಿತಿ ಲಭ್ಯವಾಗುತ್ತಿದ್ದು, ಆ ವಿಳಾಸವನ್ನು ಪರಿಶೀಲನೆ ನಡೆಸಿದಾಗ ಹಲವಾರು ಸ್ಫೋಟಕ ವಸ್ತುಗಳು ಸೇರಿದಂತೆ ಹಲವು ದಾಖಲೆಗಳನ್ನು ಪತ್ತೆಯಾಗಿದೆ. ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಫೋಟದ ವೇಳೆ ಗಾಯಗೊಂಡಿದ್ದ ಶಂಕಿತ ಪ್ರಯಾಣಿಕನ ಕುರಿತು ಮಾಹಿತಿಯನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ.



Join Whatsapp