ಗರ್ಭಿಣಿಯನ್ನು 3.5 ಕಿಮೀ ವರೆಗೆ ಜೋಳಿಗೆಯಲ್ಲಿ ಹೊತ್ತೊಯ್ದು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು

Prasthutha|

ತಿರುವನಂತಪುರಂ: ಇಲ್ಲಿನ ಬುಡಕಟ್ಟು ಗ್ರಾಮಕ್ಕೆ ತಲುಪುವ ರಸ್ತೆ ಸಂಪೂರ್ಣ ಹಾಳಾಗಿದ್ದರಿಂದ ಆಂಬುಲೆನ್ಸ್  ತಲುಪಲು ಸಾಧ್ಯವಾಗದೇ ಗರ್ಭಿಣಿಯನ್ನು  ಸುಮಾರು ಮೂರುವರೆ ಕಿಮೀ ವರೆಗೆ ಜೋಳಿಗೆಯಲ್ಲೇ ಹೊತ್ತೊಯ್ದ ಘಟನೆ ಪಾಲಕ್ಕಾಡ್ ಬಳಿ ನಡೆದಿದೆ.

- Advertisement -

ಪಾಲಕ್ಕಾಡ್ ಪ್ರದೇಶದ ಅಟ್ಟಪಾಡಿ ತಾಲೂಕಿನ ಗ್ರಾಮದಲ್ಲಿ ರಸ್ತೆ ಹಾಳಾಗಿದ್ದರಿಂದ ಆಂಬುಲೆನ್ಸ್ ತಲುಪಲು ಸಾಧ್ಯವಾಗದೇ ಡೋಲಿ ಕಟ್ಟಿ ಮಹಿಳೆಯನ್ನು ಹೆಗಲ ಮೇಲೆ ಹೊತ್ತು ತಂದಿದ್ದಾರೆ. ಮುಖ್ಯರಸ್ತೆಗೆ ಬಂದ ನಂತರ ಆಂಬುಲೆನ್ಸ್’ನಲ್ಲಿ ಆಸ್ಪತ್ರೆಗೆ  ಕರೆದೊಯ್ಯಲಾಗಿದೆ.

ಬುಡಕಟ್ಟು ಮಹಿಳೆ ಸುಮತಿ ಮುರುಕನ್ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ವೈದ್ಯರ ಪ್ರಕಾರ ಆಕೆಯ ಹೆರಿಗೆ ಮುಂದಿನ ವಾರ ನಡೆಯಬೇಕಿತ್ತು. ಆದರೂ ಮಧ್ಯರಾತ್ರಿ ಹೆರಿಗೆ ಕಾಣಿಸಿಕೊಂಡಿತ್ತು. ಬಳಿಕ ಕೊಟ್ಟತಾರಾ ಬುಡಕಟ್ಟು ಸ್ಪೆಷಾಲಿಟಿ ಆಸ್ಪತ್ರೆಯಿಂದ ಕಾಡುಕುಮಣ್ಣ ಗ್ರಾಮಕ್ಕೆ ಆಂಬುಲೆನ್ಸ್ ಕಳುಹಿಸಿಕೊಡುವಂತೆ ಕರೆ ಮಾಡಿದರು. ಆದರೆ ಗ್ರಾಮಕ್ಕೆ ಬರುವ ರಸ್ತೆ ತೀರಾ ಹದಗೆಟ್ಟಿದ್ದರಿಂದ ಆಂಬುಲೆನ್ಸ್ ಮೂರುವರೆ ಕಿಮೀ ದೂರದಲ್ಲಿರುವ ಮುಖ್ಯರಸ್ತೆ ವರೆಗೆ ಮಾತ್ರ ಬರಲು ಸಾಧ್ಯವಾಯಿತು.

- Advertisement -

ಆದ್ದರಿಂದ ಸುಮತಿ ಸಂಬಂಧಿಕರೇ ಜೋಳಿಗೆಯನ್ನು ಕಟ್ಟಿ ಅದರಲ್ಲಿ ಆಕೆಯನ್ನು ಕೂರಿಸಿ ಕಾಡುದಾರಿಯಲ್ಲೇ ನಡೆದುಕೊಂಡು ಮುಖ್ಯರಸ್ತೆಗೆ ಬಂದರು. ನಂತರ ಆಂಬುಲೆನ್ಸ್’ನಲ್ಲಿ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದೀಗ ಸುಮತಿ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ.

Join Whatsapp