ಪ್ರವಾಹ ಪರಿಸ್ಥಿತಿ ನಿಭಾಯಿಸುವ ಕುರಿತು ವಿವಿಧ ಇಲಾಖೆಗಳ ಜೊತೆ ದ. ಕ ಜಿಲ್ಲಾಧಿಕಾರಿ ಚರ್ಚೆ

Prasthutha|

ಮಂಗಳೂರು : ಮುಂಗಾರು ಮಳೆಯ ಸಮಯದಲ್ಲಿ ಉಂಟಾಗಬಹುದಾದ ನೆರೆ, ಪ್ರವಾಹಗಳನ್ನು ನಿಭಾಯಿಸಲು ಉಪಯೋಗಿಸುವ ರಕ್ಷಣಾ ಸಾಮಗ್ರಿಗಳ ಪ್ರಾತ್ಯಕ್ಷಿತೆಯನ್ನು ಹಾಗೂ ಪೂರ್ವ ಸಿದ್ದತೆಯ ಬಗ್ಗೆ ನಗರದ ಪಾಂಡೇಶ್ವರ ಅಗ್ನಿಶಾಮಕ ಠಾಣೆಗೆ ಭೇಟಿ ನೀಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆವಿ ರಾಜೇಂದ್ರ ಪರಿಶೀಲನೆ ನಡೆಸಿದರು. ನಂತರ ಮುಖ್ಯ ಅಗ್ನಿಶಾಮಕ ಅಧಿಕಾರಿ ಕಚೇರಿಯಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ, ಎನ್.ಡಿ,ಆರ್.ಎಫ್., ರಾಜ್ಯ ವಿಪತ್ತು ಸ್ಪಂದನಾ ಪಡೆ, ಗೃಹ ರಕ್ಷಕ ದಳ, ಪೌರ ರಕ್ಷಣೆ ಇಲಾಖೆ ಪ್ರವಾಹ ಸಂದರ್ಭದಲ್ಲಿ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

- Advertisement -

ಈ ಸಭೆಯಲ್ಲಿ ಮುಖ್ಯ ಅಗ್ನಿಶಾಮಕ ಅಧಿಕಾರಿ ತಿಪ್ಪೇಸ್ವಾಮಿ. ಜಿ., ಮಂಗಳೂರು ತಾಲೂಕು ಸಹಾಯಕ ಆಯುಕ್ತ ಮದನ್ ಮೋಹನ್, ಗೃಹ ರಕ್ಷಕ ದಳದ ಡಾ.ಮುರಳಿ ಮೋಹನ್ ಚೂಂತಾರು, , ಎನ್.ಡಿ.ಆರ್.ಎಫ್. ಕಮಾಂಡಿಂಗ್ ಆಫೀಸರ್ ರಾಜೇಶ್ ಪ್ರಸಾದ್ ಚೌದರಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಭರತ್ ಕುಮಾರ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ (ಅಗ್ನಿ ನಿಯಂತ್ರಣ) ಮಹಮ್ಮದ್ ಜುಲ್ಫಿಕರ್ ನವಾಜ್, ರಮೇಶ್, ವಿಜಯ ಕುಮಾರ್ ಪೂಜಾರ್, ಜಿಲ್ಲಾ ವಿಪತ್ತು ನಿರ್ವಹಣ ಪರಿಣಿತರು ಹಾಜರಿದ್ದರು.

Join Whatsapp