ಊರು ಬಿಟ್ರೆ ಹೇಗೆ ಭಟ್ರೆ?: ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾದ ಕಹಳೆ ನ್ಯೂಸ್ ಸಂಪಾದಕನಿಗೆ ಪ್ರತಿಭಾ ಕುಳಾಯಿ ವಾರ್ನಿಂಗ್

Prasthutha|

ನಿಮಗೆ ನಾಗವಲ್ಲಿ, ಕಾಂತಾರ ತೋರಿಸ್ತೀನಿ ಬನ್ನಿ!

- Advertisement -

ಮಂಗಳೂರು: ಮಾಜಿ ಕಾರ್ಪೋರೇಟರ್ , ಕೆಪಿಸಿಸಿ ಸಂಯೋಜಕಿ ಹಾಗೂ ಇತ್ತೀಚೆಗೆ ಟೋಲ್ ವಿರೋಧಿ ಹೋರಾಟ ಸಮಿತಿಯಲ್ಲಿ ಸಕ್ರಿಯವಾಗಿದ್ದ ಪ್ರತಿಭಾ ಕುಳಾಯಿ ಕುರಿತು ಕಹಳೆ ನ್ಯೂಸ್ ಸಂಪಾದಕ ಶ್ಯಾಮ ಸುದರ್ಶನ ಭಟ್ ಹೊಸಮೂಲೆ ಎಂಬಾತ ಅವಾಚ್ಯವಾಗಿ ಕಮೆಂಟ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿಭಾ ಕುಳಾಯಿ ಪ್ರೆಸ್ ಮೀಟ್ ಕರೆದು ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ ಈ ಬಗ್ಗೆ ಶ್ಯಾಮ ಸುದರ್ಶನ ಭಟ್ ಲೈವ್ ನಲ್ಲಿ ಮಾತನಾಡಿ, ವೈರಲ್ ಫೋಟೊವನ್ನು ಶೇರ್ ಮಾಡಿ ನಾನು ಬರೆದಿದ್ದೇನೆ. ಅದನ್ನು ಪ್ರತಿಭಾ ಕುಳಾಯಿ ತಪ್ಪಾಗಿ ಗ್ರಹಿಸಿದ್ದಾರೆ. ನಾನು ಅವರು ಗ್ರಹಿಸಿದ ರೀತಿ ಬರೆದಿಲ್ಲ ಎಂದು ಸಮರ್ಥನೆಯನ್ನು ನೀಡಿದ್ದಾನೆ. ತನಗೇ ಅನ್ಯಾಯವಾಗಿದೆ ಎಂಬಂತೆ ಅವಲತ್ತು ತೋಡಿಕೊಂಡಿದ್ದಾನೆ.

- Advertisement -

ಈ ಬಗ್ಗೆ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರತಿಭಾ ಕುಳಾಯಿ, ಮೊಬೈಲ್ ಸ್ವಿಚ್ ಆಫ್ ಮಾಡಿ ಊರು ಬಿಟ್ಟರೆ ನಾನು ನಿಮ್ಮನ್ನು ಆರಾಮಾಗಿರಲು ಬಿಡುತ್ತೇನಾ ಭಟ್ರೇ, ನಿಮಗೆ ನನ್ನ “ನಾಗವಲ್ಲಿ” “ಕಾಂತಾರ” ಎಲ್ಲಾ ನೋಡಬೇಕು ಅಲ್ವಾ ಭಟ್ರೇ, ನೀವೇ ಊರು ಬಿಟ್ಟು ನಾಪತ್ತೆ ಆದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.


ನನ್ನ ಬಗ್ಗೆ ನೀವೊಬ್ಬ ಪತ್ರಕರ್ತ ಅನ್ನೋದನ್ನು ಮರೆತು ಕಮೆಂಟ್ಸ್ ಮಾಡುವಾಗ ನೀವು ಊರು ಬಿಡೋ ಯೋಚನೆ ಮಾಡಿಲ್ಲ ಅನಿಸುತ್ತೆ. ನಿಮ್ಮ ಸ್ನೇಹಿತ ಕೀರ್ತನ್ ಶೆಟ್ಟಿ ಕೂಡಾ ಪೊಲೀಸ್ ಬಂಧನದ ಭಯದಲ್ಲಿ ನಾಪತ್ತೆಯಾಗಿದ್ದಾನೆ. ಇದೆಲ್ಲ ಬೇಕಿತ್ತಾ ಭಟ್ರೇ ಎಂದು ಹೇಳಿದ್ದಾರೆ.

ಇನ್ನು ಶ್ಯಾಮ ಸುದರ್ಶನ ಭಟ್ ನ ಸಮರ್ಥನೆಗೆ ಸಾರ್ವಜನಿಕರು ಪ್ರತಿಕ್ರಿಯಿಸಿದ್ದು, ನಾನು ಪ್ರತಿಭಾ ಕುಳಾಯಿ ಭಾವಿಸಿದ ಅರ್ಥದಲ್ಲಿ ಬರೆದಿಲ್ಲ ಎನ್ನುತ್ತೀರಲ್ವಾ, ಅಂತಹ ಕೊಳಕು ಕಮೆಂಟಿಗೆ ನಿಮ್ಮಲ್ಲಿರುವ ಅರ್ಥವನ್ನಾದರೂ ತಿಳಿಸಬೇಕಿತ್ತಲ್ವಾ ಎಂದು ಜಾಡಿಸುತ್ತಿದ್ದಾರೆ.

Join Whatsapp