ಮೈಸೂರು:ವಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿ ಹೋಗುವ ಸಾಧ್ಯತೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಸ್ವತಃ ಸಂಸದ ಫೇಸ್‌ಬುಕ್ ಲೈವ್‌ನಲ್ಲಿ ಬಂದು ಭಾವುಕರಾಗಿ ಮಾತನಾಡಿದ್ದಾರೆ
ದೇಶಕ್ಕೆ ಮೋದಿ ಬೇಕು, ನಮ್ಮಲ್ಲೂ ಸಣ್ಣ ಮೋದಿ ಬೇಕು ಅಂತಾ ಜನ ಬಯಸುತ್ತಾರೆ. ಹೀಗಾಗಿ ನಾನು ಜನರ ನಿರೀಕ್ಷೆಗೆ ತಕ್ಕಂತೆ ಇರಬೇಕಾಗುತ್ತೆ. ಸಂಸದನಾಗಿ 10 ವರ್ಷ ಪೂರೈಸಿದ್ದೇನೆ. ಕೆಲಸ ಮಾಡಲು 3-4 ದಿನ ಮಾತ್ರ ಬಾಕಿ ಇದೆ. ಏಕೆಂದರೆ ಮಾರ್ಚ್ 15ರೊಳಗೆ ಚುನಾವಣೆ ಜಾರಿ ಆಗುತ್ತೆ. ಎಂದಿದ್ದಾರೆ.
ಕೊಡಗು ಜಿಲ್ಲೆಯ ಜನರ ಡಿಎನ್‌ಎ, ರಕ್ತದಲ್ಲೇ ದೇಶಭಕ್ತಿ ಇದೆ, ಮೈಸೂರಿನಲ್ಲಿ ಜಾತಿ, ರಾಜಕೀಯ ಒಡಕು ಇದೆ. ನಾನು ದೇವರಲ್ಲಿ ವೈಯಕ್ತಿಕವಾಗಿ ಏನೂ ಕೇಳೊಲ್ಲ. ನನಗೆ ರಕ್ಷನೆ ಕೊಡು, ಜನರ ಕೆಲಸ ಮಾಡಲು ಅವಕಾಶ ಕೊಡು ಅಂತಾ ಕೇಳುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ನನಗೆ ಟಿಕೆಟ್ ಸಿಗುತ್ತಾ ಇಲ್ವಾ ಅಂತಾ ಕುತೂಹಲ ಇಟ್ಟುಕೊಳ್ಳಬೇಡಿ. ದೇವರು ಒಳ್ಳೆಯದು ಮಾಡ್ತಾನೆ ಎಂದು ಬೆಂಬಲಿಗರಿಗೆ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.