ನ್ಯಾಷನಲ್ ಲೀಡರ್ ಎಂಬ ಭ್ರಮೆಯಲ್ಲಿ ಪ್ರತಾಪ್ ಸಿಂಹ ಇದ್ದಾರೆ: ಯತೀಂದ್ರ ಸಿದ್ದರಾಮಯ್ಯ

Prasthutha|

ಮೈಸೂರು: ಸಂಸದ ಪ್ರತಾಪ ಸಿಂಹ ತಾವೊಬ್ಬ ನ್ಯಾಷನಲ್ ಲೀಡರ್ ಎಂಬ ಭ್ರಮೆಯಲ್ಲಿ ಇದ್ದಾರೆ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

- Advertisement -

ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತಾಡಿದ ಅವರು, ತಾವು ನ್ಯಾಷನಲ್ ಲೀಡರ್ ಎಂಬ ಭ್ರಮೆಯಲ್ಲಿ ಸಿದ್ದರಾಮಯ್ಯ ನವರ ವಿರುದ್ದ ಹೇಳಿಕೆ ಕೊಡುತ್ತಿದ್ದಾರೆ ಅಷ್ಟೆ.ನಮ್ಮ ತಂದೆ ಯಾವತ್ತು ಟಾರ್ಗೆಟ್ ರಾಜಕಾರಣ ಮಾಡಿಲ್ಲ. ತಮಗೆ ರಾಜಕೀಯವಾಗಿ ಅನೇಕ ಬಾರಿ ಅನ್ಯಾಯವಾಗಿದ್ದರು ಅನ್ಯಾಯ ಮಾಡಿದ್ದವರ ವಿರುದ್ಧ ಅವರು ರಾಜಕಾರಣ ಮಾಡಲಿಲ್ಲ. ಇಂಥದರಲ್ಲಿ ಪ್ರತಾಪ ಸಿಂಹನನ್ನ ಯಾಕೆ ತಂದೆಯವರು ಟಾರ್ಗೆಟ್ ಮಾಡುತ್ತಾರೆ‌. ಅವರ ತಮ್ಮ ತಪ್ಪು ಮಾಡಿದ್ದಾರೆ ಅದಕ್ಕಾಗಿ ಕೇಸ್ ಆಗಿದೆ ಅಷ್ಟೇ. ಇದರಲ್ಲಿ ಟಾರ್ಗೆಟ್ ಎಲ್ಲಿಂದ ಬಂತು. ತಮ್ಮನ ತಪ್ಪು ಮುಚ್ಚಿಕೊಳ್ಳಲು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಇಲ್ಲಿ ನನ್ನ ರಾಜಕೀಯ ಭದ್ರತೆಯೆ ಪ್ರಶ್ನೆಯೇ ಇಲ್ಲ ಅಂತ ಯತೀಂದ್ರ ಕಿಡಿಕಾರಿದರು. ಮೈಸೂರು ಲೋಕಸಭಾ ಚುನಾವಣೆಗೆ ನಾನಂತು ಟಿಕೆಟ್ ಕೇಳಿಲ್ಲ. ಪಕ್ಷ ನಾನೇ ಸ್ಪರ್ಧಿಸಬೇಕು ಎಂದರೆ ಪಕ್ಷದ ತೀರ್ಮಾನಕ್ಕೆ ಬದ್ಧ. ನಾನು ಇವತ್ತಿನವರೆಗೆ ಆ ವಿಚಾರದಲ್ಲಿ ಯಾವ ಯೋಚನೆ ಮಾಡಿಲ್ಲ.ಪಕ್ಷ ಯಾರಿಗೆ ಟಿಕೆಟ್ ಕೊಟ್ಟರು ಅವರನ್ನ ಗೆಲ್ಲಿಸುವುದು ನಮ್ಮ ಜವಾಬ್ದಾರಿ. ಈ ದೃಷ್ಟಿಯಿಂದ ಪಕ್ಷ ಸಂಘಟನೆ ಮಾಡುತ್ತಿದ್ದೇನೆ ಎಂದು ಯತೀಂದ್ರ ಹೇಳಿದರು.



Join Whatsapp