‘ಉದ್ಯೋಗ ಕೇಳಿದರೆ ಅಭ್ಯರ್ಥಿಯನ್ನಾಗಿಸುತ್ತಾರೆ’ | ಕೇರಳದ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ವ್ಯಂಗ್ಯವಾಡಿದ ಪ್ರಶಾಂತ್ ಭೂಷಣ್

Prasthutha|

ಕೇರಳದ ಬಿಜೆಪಿ ಅಭ್ಯರ್ಥಿ ಘೋಷಣೆಯನ್ನು ಹಿರಿಯ ವಕೀಲ ಪ್ರಶಾಂತ್ ಭೂಷಣ್ ವ್ಯಂಗ್ಯವಾಡಿದ್ದಾರೆ. ಅವರು ಕಾರ್ಟೂನೊಂದನ್ನು ಹಂಚುವ ಮೂಲಕ ಟ್ವೀಟ್ ಮಾಡಿದ್ದಾರೆ. ‘ನಿರುದ್ಯೋಗಿ ಯುವಕರು ಈಗ ಉದ್ಯೋಗ ಕೇಳಲು ಹೆದರುತ್ತಾರೆ. ಉದ್ಯೋಗಗಳ ಬದಲು ಕೇರಳದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡುತ್ತಿದೆ’ ಎಂದು ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದಾರೆ.

- Advertisement -

 ಎಂಬಿಎ ಪದವಿಯೊಂದಿಗೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುತ್ತಿರುವ ಯುವಕನಿಗೆ ಚುನಾವಣಾ ಟಿಕೆಟ್‌ ನೀಡುವ ವ್ಯಂಗ್ಯಚಿತ್ರವನ್ನು ಪ್ರಶಾಂತ್ ಭೂಷಣ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕೇರಳದ ಮಾನಂದವಾಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟ ಮಣಿಕುಟ್ಟನ್ ಎಂಬವರು ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ತನಗೆ ತಿಳಿಯದೆಯೇ ಬಿಜೆಪಿ ತನ್ನನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ತಾನು ಬಿಜೆಪಿ ಬೆಂಬಲಿಗನಲ್ಲ ಎಂದು ಮಣಿಕುಟ್ಟನ್ ಹೇಳಿದ್ದಾರೆ.



Join Whatsapp