ಮಂಗಳೂರು: ವಿವಾಹಿತೆಯನ್ನು ಲೈಂಗಿಕವಾಗಿ ಬಳಸಿಕೊಂಡು, ನಗ್ನ ಚಿತ್ರ ಸೆರೆಹಿಡಿದು ಅದನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ ಬೇಡಿಕೆಯಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಪುತ್ತೂರು ತಾಲೂಕು ಅರ್ಲಪದವು ಬಳಿ ನಿವಾಸಿ ಪ್ರಶಾಂತ ಭಟ್ ಮಾಣಿಲ (35) ಬಂಧಿತ ಆರೋಪಿ.
ದೂರುದಾರ ಮಹಿಳೆಯು ವಿವಾಹಿತೆ ಆಗಿದ್ದು, ಸಂಗೀತದಲ್ಲಿ ಆಸಕ್ತಿ ಉಳ್ಳವಳಾಗಿದ್ದಳು. ಆರೋಪಿಯು ದೂರುದಾರಳಿಗೆ ನಿನಗೆ ಆರ್ಕೆಸ್ಟ್ರಾದಲ್ಲಿ ಹಾಡಲು ಅವಕಾಶ ಕೊಡಿಸುವುದಾಗಿ ಹೇಳಿ ಆಸೆ ಹುಟ್ಟಿಸಿದ್ದ ಎನ್ನಳಾಗಿದೆ. ಕ್ಲಬ್ ಹೌಸ್ ಅಪ್ಲಿಕೇಶನ್ ಮೂಲಕ ಈಕೆಗೆ ಮೂರು ವರ್ಷದ ಹಿಂದೆ, ಸದರಿ ಆರೋಪಿ ಪ್ರಶಾಂತ ಭಟ್ ಮಾಣಿಲ ಪರಿಚಯ ಆಗಿದ್ದ. ಹೀಗೆ ಪ್ರಶಾಂತ್ ಭಟ್ ಮತ್ತು ವಿವಾಹಿತೆ – ಇಬ್ಬರೂ ಹೀಗೆ ಕ್ಲಬ್ ಹೌಸ್ ಆ್ಯಪ್ ನಲ್ಲಿ ಚಾಟ್ ಮಾಡುತ್ತಾ ಇಬ್ಬರೂ ಫ್ರೆಂಡ್ ಆಗಿದ್ದರು. ಕ್ರಮೇಣ ಇಬ್ಬರ ಮಧ್ಯೆ ಪ್ರೀತಿ ಕುದುರಿದೆ. ನಂತರ 2023 ರ ಫೆಬ್ರುವರಿಯಲ್ಲಿ ಶಿರಸಿಯ ಖಾಸಗಿ ಲಾಡ್ಜ್ ಗೆ ಆರೋಪಿಯು ದೂರುದಾರಳನ್ನು ಕರೆದುಕೊಂಡು ಹೋಗಿ, ಅಲ್ಲಿ ದೂರುದಾರಳ ಮೇಲೆ ಬಲಾತ್ಕಾರದಿಂದ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.