ಬಿ.ಕೆ. ಹರಿಪ್ರಸಾದ್‍ರನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ ನಾಯಕರಿಂದಲೇ ಸಂಚು: ಪ್ರಣವಾನಂದ ಸ್ವಾಮೀಜಿ ಆರೋಪ

Prasthutha|

ಕೊಪ್ಪಳ: ಬಿ.ಕೆ ಹರಿಪ್ರಸಾದ್ ಅವರನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್‍ನ ಕೆಲವು ನಾಯಕರು ಹುನ್ನಾರ ನಡೆಸಿದ್ದಾರೆ ಎಂದು ಪ್ರಣವಾನಂದ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.

- Advertisement -

ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್.ಎಲ್ ಜಾಲಪ್ಪ, ದಿ.ಬಂಗಾರಪ್ಪ ಅವರ ರೀತಿಯಲ್ಲೆ ಹರಿಪ್ರಸಾದ್ ಅವರನ್ನು ರಾಜಕೀಯವಾಗಿ ಮುಗಿಸುವ ಸಂಚು ನಡೆಯುತ್ತಿದೆ. ಹರಿಪ್ರಸಾದ್ ಅವರಿಗೆ ಮಂತ್ರಿ ಸ್ಥಾನ ಕೊಡದೇ ಇರುವುದಕ್ಕೆ ನಮ್ಮ ಹೋರಾಟವಲ್ಲ. ಅವರನ್ನು ನಡೆಸಿಕೊಂಡ ರೀತಿ ನಮ್ಮ ಸಮುದಾಯಕ್ಕೆ ನೋವುಂಟು ಮಾಡಿದೆ. ಕೆಲವು ವಲಸಿಗ ಕಾಂಗ್ರೆಸ್‍ನವರಿಂದ ಅವರ ವಿರುದ್ಧ ಸಂಚು ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.

ಸೋನಿಯಾಗಾಂಧಿಯವರೇ ಅವರನ್ನು ಗೌರವದಿಂದ ಹರಿ ಎಂದು ಕರೆಯುತ್ತಾರೆ. ಅಂಥವರಿಗೆ ಸ್ಥಾನಮಾನ ನೀಡಿ ಎಂದು ಸೋನಿಯಾಗಾಂಧಿಯವರು ಪತ್ರ ಬರೆದರೂ ಸಹ ಖರ್ಗೆ ಸೇರಿ ಕೆಲವು ವಲಸಿಗ ಕಾಂಗ್ರೆಸಿಗರು ಹರಿಪ್ರಸಾದ್ ಅವರನ್ನು ನಿರ್ಲಕ್ಷಿಸಿದ್ದಾರೆ. ಇದೇ ವಿಚಾರಕ್ಕೆ ಸೆ.9 ರಂದು ಬೆಂಗಳೂರಿನಲ್ಲಿ ಬೃಹತ್ ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ದಕ್ಷಿಣ ಭಾರತದ 6 ರಾಜ್ಯಗಳಿಂದ ನಮ್ಮ ಸಮುದಾಯದವರು ಬರುತ್ತಿದ್ದಾರೆ. ಈ ಸಮಾವೇಶದ ಮುಖಾಂತರ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

- Advertisement -

ಈಗಾಗಲೇ ಈಡಿಗ ಸಮುದಾಯಕ್ಕೆ ಸಾಕಷ್ಟು ಅನ್ಯಾಯ ಮಾಡಲಾಗಿದೆ. ಈ ಬಜೆಟ್‍ನಲ್ಲಿ ಈಡಿಗ ಸಮುದಾಯದ ನಿಗಮ ಬಿಟ್ಟು ಉಳಿದ ನಿಗಮಗಳಿಗೆ ಅನುದಾನ ನೀಡಲಾಗಿದೆ. ಈಡಿಗ ನಿಗಮಕ್ಕೆ ನಯಾ ಪೈಸೆ ಅನುದಾನ ಕೊಡದೆ ಅನ್ಯಾಯ ಮಾಡಲಾಗಿದೆ ಎಂದು ಅವರು ಆಕ್ರೋಶ ಹೊರ ಹಾಕಿದ್ದಾರೆ.

Join Whatsapp