ಪ್ರಣವ್ ಮುಖರ್ಜಿ ಪುತ್ರ ಅಭಿಜಿತ್ ಮುಖರ್ಜಿ ತೃಣಮೂಲ ಕಾಂಗ್ರೆಸ್ ಗೆ ಸೇರ್ಪಡೆ

Prasthutha|

ಕೋಲ್ಕತ್ತಾ: ಮಾಜಿ ರಾಷ್ಟ್ರಪತಿ ಮತ್ತು ಕಾಂಗ್ರೆಸ್ ಮುಖಂಡರಾಗಿದ್ದ ಪ್ರಣವ್ ಮುಖರ್ಜಿ ಅವರ ಪುತ್ರ ಅಭಿಜಿತ್ ಮುಖರ್ಜಿ ಇಂದು ತೃಣಮೂಲ ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.

- Advertisement -

ಇಂದು ಸಂಜೆ 4 ಗಂಟೆಗೆ ಅವರು ತೃಣಮೂಲ ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗಿದೆ. ಜಂಗೀಪುರದ ಮಾಜಿ ಕಾಂಗ್ರೆಸ್ ಸಂಸದರೂ ಆಗಿರುವ ಅಭಿಜಿತ್ ಇತ್ತೀಚೆಗೆ ಟಿಎಂಸಿ ನಾಯಕರೊಂದಿಗೆ ಮಾತುಕತೆಯನ್ನೂ ನಡೆಸಿದ್ದರು.

ವಿವಾದಿತ ಕೋಲ್ಕತ್ತಾದ ವ್ಯಾಕ್ಸಿನೇಷನ್ ಶಿಬಿರಕ್ಕೆ ಸಂಬಂಧಿಸಿದಂತೆ ಅಭಿಜಿತ್ ಮುಖರ್ಜಿ, ಮಮತಾ ಬ್ಯಾನರ್ಜಿಗೆ ಟ್ವಿಟ್ಟರ್ ನಲ್ಲಿ ಪರೋಕ್ಷವಾಗಿ ತಮ್ಮ ಬೆಂಬಲವನ್ನು ಸೂಚಿಸಿದ್ದರು.

- Advertisement -

“ಐಎಎಸ್ ಅಧಿಕಾರಿ ದೇಬೆಂಚನ್ ದೇಬ್ ನಡೆಸಿದ ನಕಲಿ ವ್ಯಾಕ್ಸಿನೇಷನ್ ಶಿಬಿರಕ್ಕೆ ಮಮತಾ ದೀದಿಯನ್ನು ವೈಯಕ್ತಿಕವಾಗಿ ದೂಷಿಸಬೇಕಾದರೆ, ನೀರವ್ ಮೋದಿ, ವಿಜಯ್ ಮಲ್ಯ ಮತ್ತು ಮೆಹುಲ್ ಚೋಕ್ಸಿ ಇತರ ಎಲ್ಲಾ ಭ್ರಷ್ಟಾಚಾರಗಳಿಗೆ ಪಧಾನಿ ಮೋದಿಯನ್ನು ದೂಷಿಸಬೇಕು. ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಪಶ್ಚಿಮ ಬಂಗಾಳ ಸರ್ಕಾರವನ್ನು ದೂಷಿಸುವುದರಲ್ಲಿ ಯಾವುದೇ ಅರ್ಥವಿಲ್ಲ” ಎಂದು ಅಭಿಜಿತ್ ಮುಖರ್ಜಿ ಟ್ವೀಟ್ ಮಾಡಿದ್ದರು.



Join Whatsapp