ಪಣಜಿ: ಹಂಗಾಮಿ ಮುಖ್ಯಮಂತ್ರಿಯಾಗಿದ್ದ ಪ್ರಮೋದ್ ಸಾವಂತ್ ಅವರು ಗೋವಾದ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯಲಿದ್ದು, ಸರ್ಕಾರ ರಚಿಸುವ ಹಕ್ಕು ಮಂಡಿಸಲು ನಿರ್ಧರಿಸಿದ್ದಾರೆ. 48ರ ಹರೆಯದ ಸಾವಂತ್ ಅವರು 2019-2022ರ ಅವಧಿಯಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದರು.
ಬಿಜೆಪಿ ಪಕ್ಷದ ಚುನಾವಣಾ ಮೇಲುಸ್ತುವಾಗಿಯಾಗಿ ಆಗಮಿಸಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೇಂದ್ರ ಸಂಸದೀಯ ಮಂಡಳಿ ರಾಯಭಾರಿ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಸಮ್ಮುಖದಲ್ಲಿ ನಡೆದ 20 ಸದಸ್ಯರ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಾವಂತ್ ಅವರು ಶಾಸಕಾಂಗ ಪಕ್ಷದ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ.
ಕೇಂದ್ರ ಸಚಿವ ತೋಮರ್ ಅವರು ಸಾವಂತ್ ಅವರ ಆಯ್ಕೆಯನ್ನು ಔಪಚಾರಿಕವಾಗಿ ಘೋಷಣೆ ಮಾಡಿದರು.
ಫೆಬ್ರವರಿ 14 ರಂದು ಗೋವಾದ 40 ಸೀಟುಗಳಿಗೆ ನಡೆದ ಚುನಾವಣೆಯಲ್ಲಿ 20 ಕ್ಷೇತ್ರಗಳಲ್ಲಿ ಬಿಜೆಪಿಯು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಹುಮತಕ್ಕೆ ಒಂದು ಸೀಟಿನ ಕೊರತೆಯಿದ್ದು, ಮೂವರು ಸ್ವತಂತ್ರ ಶಾಸಕರು ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ಇಬ್ಬರು ಶಾಸಕರು ಬೆಂಬಲ ಸೇರಿದಂತೆ ಐದು ಶಾಸಕರು ಬಾಹ್ಯ ಬೆಂಬಲವನ್ನು ಪಡೆದಿದೆ.