ಹಿಂದೂ ರಾಷ್ಟ್ರ ನಿರ್ಮಾಣ ವಿಚಾರದಲ್ಲಿ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದೆ : ಮುತಾಲಿಕ್ ವಾಗ್ದಾಳಿ

Prasthutha|

► ನನ್ನ ವಿರುದ್ಧ 107 ಪ್ರಕರಣ ದಾಖಲಿಸಿ ಹೋರಾಟಕ್ಕೆ ಬಿಜೆಪಿ ಅಡ್ಡಿಯಾಗಿದೆ

- Advertisement -

ಹುಬ್ಬಳ್ಳಿ: ಹಿಂದೂ ರಾಷ್ಟ್ರ ನಿರ್ಮಾಣದ ವಿಚಾರದಲ್ಲಿ ಬಿಜೆಪಿಯು ಹೊಂದಾಣಿಕೆ ಮಾಡಿಕೊಂಡಿದೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ವಾಗ್ದಾಳಿ ನಡೆಸಿದ್ದಾರೆ. ನಗರದ ವೈ.ಎಸ್‌.ಬಮ್ಮಾಪುರ ಸಭಾಭವನದಲ್ಲಿ ನಡೆದ ಧರ್ಮ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಮುತಾಲಿಕ್ ಬಿಜೆಪಿಯು ಹಿಂದುತ್ವ, ಹಿಂದು ರಾಷ್ಟ್ರ ನಿರ್ಮಾಣ ಮತ್ತು ಗೋವು ರಕ್ಷಣೆ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಂಡಿದೆ. ಆದರೆ, ಶ್ರೀರಾಮಸೇನೆ ಕಿಂಚಿತ್ತು ಹೊಂದಾಣಿಕೆ ಮಾಡಿಕೊಳ್ಳದೆ ಮುಂದುವರಿಯುತ್ತದೆ ಎಂದು ಹೇಳಿದರು.

ಹಿಂದೂ ರಾಷ್ಟ್ರ ರಕ್ಷಣೆ ಕಾರ್ಯಕ್ಕೆ ಬೆಂಬಲಿಸಬೇಕ಻ಗಿದ್ದ ಬಿಜೆಪಿ , ಕಾಂಗ್ರೆಸ್ ಇಂದು ಕುಗ್ಗಿಸುವ ಕೆಲಸ ಮಾಡುತ್ತಿವೆ, ಹಿಂದುತ್ವದ ರಕ್ಷಣೆಗೆ ಹೊರಟವರನ್ನು ರೌಡಿ ಶೀಟರ್‌ ,ಗೂಂಡಾ ಕಾಯ್ದೆ ಮುಂತಾದ ಪ್ರಕರಣಗಳನ್ನು ದಾಖಲಿಸಿ ಜೈಲಿಗಟ್ಟಲಾಗುತ್ತಿದೆ ಎಂದರು. ಬಿಜೆಪಿಯು ನನ್ನ ವಿರುದ್ಧ 107 ಪ್ರಕರಣ ದಾಖಲಿಸಿ ನನ್ನ ಹೋರಾಟಕ್ಕೆ ಅಡ್ಡಿಯಾಗಿದೆ ಎಂದು ಆರೋಪಿಸಿದರು. 17 ವರ್ಷಗಳಿಂದ ಶ್ರೀರಾಮಸೇನೆ ಹೋರಾಟ ಮಾಡುತ್ತಿದ್ದು, ಈ ಹೋರಾಟ ನಿರಂತರವಾಗಿ ಸಾಗಲಿದೆ ಎಂದರು.

- Advertisement -

ಬಿಜೆಪಿಯು ಹಿಂದುತ್ವದ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಂಡಿದೆ. ಕೆಲ ವಿಚಾರದಲ್ಲಿ ಹೋರಾಟ ಮಾಡದೆ ಸುಮ್ಮನಾಗುತ್ತದೆ. ಆದರೆ, ಶ್ರೀರಾಮಸೇನೆ ಕಿಂಚಿತ್ತು ಹೊಂದಾಣಿಕೆ ಮಾಡಿಕೊಳ್ಳದೆ ಮುಂದುವರಿಯುತ್ತದೆ. ರಾಷ್ಟ್ರ ರಕ್ಷಣೆಗೆ ಸೈನಿಕರಂತೆ ನಾವು ಕೆಲಸ ಮಾಡಬೇಕಿದ್ದು, ಹಿಂದುಗಳು ಒಗ್ಗಟ್ಟಾಗಬೇಕು ಎಂದು ಹೇಳಿದರು.

Join Whatsapp