ಬಾಗಲಕೋಟೆ: 10 ಕ್ಷೇತ್ರಗಳ ಸರ್ವೆ ಮಾಡಿದ್ದೇನೆ. 2023ರ ವಿಧಾನಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಕ್ಷೇತ್ರ ಎಂದು ಡಿಸೆಂಬರ್ ಮೊದಲ ವಾರದಲ್ಲಿ ಘೋಷಣೆ ಮಾಡುತ್ತೇನೆ. ಶ್ರೀರಾಮಸೇನೆಯಿಂದ ಸ್ಪರ್ಧೆ ಮಾಡಲ್ಲ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವೆ. ಇದು ನನ್ನ ಕೊನೆ ಪ್ರಯತ್ನ. ತೇರದಾಳ, ಜಮಖಂಡಿ ಕ್ಷೇತ್ರ ಸೇರಿದಂತೆ ಉತ್ತೂರು, ಉಡುಪಿ, ಶೃಂಗೇರಿ, ಕಾರ್ಕಳ ಇವೆ. ಈಗ ಸರ್ವೆ ನಡಿತಾ ಇದೆ. ಕಾರ್ಯಕರ್ತರ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.