ಹಿಜಾಬ್-ಹಲಾಲ್-ಧರ್ಮದ ಹೆಸರಲ್ಲಿ ಪರಸ್ಪರ ಕಚ್ಚಾಡಿಸಿದ್ದ ಶ್ರೀಲಂಕಾ ಸಂಸದರನ್ನು ಜನ ಹಿಡಿದು ದನಕ್ಕೆ ಬಡಿದಂತೆ ಬಡಿಯುತ್ತಿದ್ದಾರೆ: ಪ್ರಕಾಶ್ ರಾಠೋಡ್

Prasthutha|

ಬೆಂಗಳೂರು: ದೇಶದ ಆರ್ಥಿಕತೆ ನಾಶ ಮಾಡಿ, ದೇಶದ ಜನರನ್ನು ಧರ್ಮದ ನೆಪದಲ್ಲಿ ಕಾದಾಡುವಂತೆ ಮಾಡಿದ್ದ ಶ್ರೀಲಂಕಾದ ಪ್ರಧಾನಿಯ ಸ್ಥಿತಿ ನೋಡಿ. ಜನ ಎಚ್ಚೆತ್ತುಕೊಂಡಾಗ ಪ್ರಧಾನಿ ಬೆದರಿ ಬಚ್ಚಿಟ್ಟುಕೊಳ್ಳುವಂತಾಯಿತು. ರಾಜೀನಾಮೆ ನಂತರವೂ ಪ್ರತಿಭಟನೆ ಮುಂದುವರಿದಿದ್ದು, ಅವರು ನೌಕಾನೆಲೆಯಲ್ಲಿ ಅವಿತು ಕೂರಬೇಕಾಯಿತು ಎಂದು ವಿಧಾನ ಪರಿಷತ್ ನ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್ ರಾಠೋಡ್ ಹೇಳಿದ್ದಾರೆ.

- Advertisement -


ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಕೇವಲ 2 ವರ್ಷದಲ್ಲಿ ದೇಶದ ಸ್ಥಿತಿ ಉಲ್ಟಾ ಆಗಿದೆ. ಹಿಜಾಬ್-ಹಲಾಲ್-ಧರ್ಮದ ಹೆಸರಲ್ಲಿ ದೇಶದ ಜನರನ್ನು ಪರಸ್ಪರ ಕಚ್ಚಾಡಿಸಿದ್ದ ಶ್ರೀಲಂಕಾ ಆಡಳಿತ ಪಕ್ಷದ ಸಂಸದರು-ಶಾಸಕರನ್ನು ಜನ ಹಿಡಿದು ದನಕ್ಕೆ ಬಡಿದಂತೆ ಬಡಿಯುತ್ತಿದ್ದಾರೆ. ಭಾರತವೂ ಹಣದುಬ್ಬರ-ಬೆಲೆ ಏರಿಕೆಯ ಪಾತಾಳಕ್ಕೆ ಜಾರುತ್ತಾ ಕೋಮುದಳ್ಳುರಿ ಹೆಚ್ಚುತ್ತಿದೆ. ದೇಶ ಬೆಲೆ ಏರಿಕೆ-ಹಣದುಬ್ಬರ-ಉದ್ಯಮಗಳ ಪಲಾಯನ-ದೇಶದ ಆಸ್ತಿಗಳ ಮಾರಾಟ-ಆದಾಯಕ್ಕಿಂತ ಸಾಲದ ಮೊತ್ತ ಹೆಚ್ಚಳ-ದೇಶದ ಜನ ಬಡವರಾಗುತ್ತಾ ಕೆಲವೇ ಉದ್ಯಮಿಗಳು ದೇಶದ ಆಸ್ತಿ ಖರೀದಿಸುತ್ತಾ ವಿಶ್ವ ಶ್ರೀಮಂತರ ಪಟ್ಟಿಗೆ ಸೇರುತ್ತಾ ಹೋದರು. ಆಡಳಿತ ಪಕ್ಷ ಆರ್ಥಿಕವಾಗಿ ಶ್ರೀಲಂಕಾ ದೇಶವನ್ನು ದಿವಾಳಿ ಮಾಡಿದ ಪರಿಣಾಮ ಇದು ಎಂದು ರಾಠೋಡ್ ತಿಳಿಸಿದ್ದಾರೆ.



Join Whatsapp