ರೈತರ ಪ್ರತಿಭಟನೆ | ಪದ್ಮ ವಿಭೂಷಣ ಪ್ರಶಸ್ತಿ ವಾಪಾಸ್ ಮಾಡಲು ಮುಂದಾದ ಪ್ರಕಾಶ್ ಸಿಂಗ್ ಬಾದಲ್

Prasthutha|

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ಉತ್ತರ ಭಾರತದ ರೈತರು ನಡೆಸುತ್ತಿರುವ ಉಗ್ರ ಹೋರಾಟವನ್ನು ಬೆಂಬಲಿಸಿ, ಸರಕಾರ ರೈತರಿಗೆ ದ್ರೋಹ ಬಗೆದಿರುವುದನ್ನು ಖಂಡಿಸಿ ತನ್ನ ಪದ್ಮ ವಿಭೂಷಣ ಪ್ರಶಸ್ತಿ ವಾಪಾಸ್ ಮಾಡುವುದಾಗಿ ಪಂಜಾಬ್ ಮಾಜಿ ಮುಖ್ಯಮಂತ್ರಿ ಮತ್ತು ಶಿರೋಮಣಿ ಅಕಾಲಿ ದಳದ ಮುಖಂಡ ಪ್ರಕಾಶ್ ಸಿಂಗ್ ಬಾದಲ್ ಘೋಷಿಸಿದ್ದಾರೆ.

- Advertisement -

ಮೋದಿ ಸರಕಾರದ ನೂತನ ಕೃಷಿ ನೀತಿ ವಿರೋಧಿಸಿ ಶಿರೋಮಣಿ ಅಕಾಲಿದಳ (ಡೆಮಾಕ್ರಟಿಕ್) ಮುಖ್ಯಸ್ಥ ಹಾಗೂ ರಾಜ್ಯಸಭಾ ಸದಸ್ಯ ಸುಖ್ ದೇವ್ ಸಿಂಗ್ ಧಿಂಡ್ಸಾ ತಮ್ಮ ಪದ್ಮಭೂಷಣ ಪ್ರಶಸ್ತಿ ಹಿಂದಿರುಗಿಸುವುದಾಗಿ ಹೇಳಿದ್ದಾರೆ.

ಶಿರೋಮಣಿ ಅಕಾಲಿ ದಳ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದಿಂದ ಹೊರಬಂದ ತಿಂಗಳುಗಳ ಬಳಿಕ ಕೈಗೊಂಡಿರುವ ಈ ನಿರ್ಧಾರ ಮಹತ್ವದ್ದಾಗಿದೆ ಮತ್ತು ರೈತರಿಗೆ ಬಹುದೊಡ್ಡ ನೈತಿಕ ಸ್ಥೈರ್ಯವನ್ನುಂಟು ಮಾಡಿದೆ.

Join Whatsapp