ಮಧ್ಯರಾತ್ರಿ ಬೆಂಗಳೂರು ತಲುಪಲಿರುವ ಪ್ರಜ್ವಲ್ ರೇವಣ್ಣ: ಬಂಧನ ಸುಲಭವಿಲ್ಲ ಎನ್ನುತ್ತಿವೆ ನಿಯಮಗಳು!

Prasthutha|

ಬೆಂಗಳೂರು: ಸಂಸದ ಪ್ರಜ್ವಲ್‌ ರೇವಣ್ಣ ಜರ್ಮನಿಯ ಮ್ಯೂನಿಕ್‌ ನಗರದಿಂದ ಮಧ್ಯಾಹ್ನ ಹೊರಟಿರುವುದು ಖಚಿತವಾಗಿದೆ. ಏರ್​ ಲುಫ್ತಾನ್ಸ್ ಏರ್​ಲೈನ್ಸ್​ನಲ್ಲಿ (ಎಲ್‌ಎಚ್‌ 764) ಹತ್ತಿರುವ ಬಗ್ಗೆ ಎಸ್​ಐಟಿಗೆ ಮಾಹಿತಿ ಲಭ್ಯವಾಗಿದೆ. ಆ ವಿಮಾನವು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್‌ 2 ಕ್ಕೆ ರಾತ್ರಿ 12. 40 ಕ್ಕೆ ಆಗಮಿಸಲಿದೆ. ಇಂದು ರಾತ್ರಿ12ರಿಂದ 1 ಗಂಟೆಯೊಳಗಡೆ ಬೆಂಗಳೂರಿಗೆ ಆಗಮಿಸಲಿದ್ದಾರೆ.

- Advertisement -

ಈಗಾಗಲೇ ಕೋರ್ಟ್ ನಿಂದ ಅರೆಸ್ಟ್ ವಾರೆಂಟ್ ಪಡೆಯಲಾಗಿದೆ. ಏರ್​ಪೋರ್ಟ್​ನಲ್ಲೇ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ. ಸ್ಥಳೀಯ ಪೊಲೀಸರ ಸಹಾಕಾರದೊಂದಿಗೆ ವಶಕ್ಕೆ ಪಡೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಆದರೆ ಹಾಲಿ ಸಂಸದರೂ ಆಗಿರುವ ಪ್ರಜ್ವಲ್​ ರೇವಣ್ಣ ಬಂಧನ ಅಷ್ಟೊಂದು ಸುಲಭದ ಮಾತಲ್ಲ ಎಂದು ಹೇಳಲಾಗುತ್ತಿದೆ. ಅಧಿಕಾರಿಗಳು ಹಲವು ಪ್ರಕ್ರಿಯೆಗಳನ್ನು ಮುಗಿಸಬೇಕಾಗಿದೆ ಎನ್ನಲಾಗಿದೆ.

- Advertisement -

ಪ್ರಜ್ವಲ್ ರೇವಣ್ಣ ಬಂದ ಕೂಡಲೇ ನಡೆಯುವ ಪ್ರಕ್ರಿಯೆಗಳು ಹೀಗಿವೆ:

ಮೊದಲು ಲುಕ್‌ಔಟ್ ನೊಟೀಸ್ ಸಂಬಂಧ ಪರಿಶೀಲನೆ ಆಗಬೇಕು.
ಪ್ರಜ್ವಲ್ ರೇವಣ್ಣ ಮೇಲೆ ಬ್ಲೂ ಕಾರ್ನರ್ ನೊಟೀಸ್ ಕೂಡ ಇದೆ.
ಪ್ರಜ್ವಲ್ ರೇವಣ್ಣ ಬಳಿ ಇರೋದು ರಾಜತಾಂತ್ರಿಕ‌ ಪಾಸ್ ಪೋರ್ಟ್.
ರಾಜತಾಂತ್ರಿಕ‌ ಪಾಸ್ ಪೋರ್ಟ್ ಹೊಂದಿದ ವ್ಯಕ್ತಿ ವಿಮಾನ ನಿಲ್ದಾಣದಲ್ಲೇ ಬಂಧನವಾದರೆ ಇಮಿಗ್ರೇಶನ್ ಮಾಹಿತಿಯನ್ನು ಸಂಬಂಧಪಟ್ಟವರಿಗೆ ತಿಳಿಸಬೇಕು.
ಪ್ರಜ್ವಲ್ ರೇವಣ್ಣ ಜನ ಪ್ರತಿನಿಧಿಯಾಗಿರುವುದರಿಂದ ಇಮಿಗ್ರೇಶನ್ ಈ ಮಾಹಿತಿಯನ್ನ ಲೋಕಸಭಾ ಸ್ಪೀಕರ್ ಗೆ ನೀಡಬೇಕು.

ಈಗಾಗಲೇ ಪ್ರಜ್ವಲ್‌‌ನ ರಾಜತಾಂತ್ರಿಕ ಪಾಸ್ ಪೋರ್ಟ್ ಮೇಲೆ ದಾಖಲಾಗಿರುವ ಲುಕ್ ಔಟ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್ ಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲಾಗಿದೆ.
ಈ ಎಲ್ಲ ಮಾಹಿತಿಗಳನ್ನ ಸಂಗ್ರಹ ಮಾಡಿ ಅದನ್ನ ಡ್ರಾಫ್ಟ್ ಮಾಡಿ ಸಹಿ ಪಡೆಯಲಿರುವ ಇಮಿಗ್ರೇಶನ್.
ಈ ಎಲ್ಲ ಪ್ರಕ್ರಿಯೆ ಬಳಿಕವೇ ಎಸ್ ಐ ಟಿಗೆ ಕ್ಲಿಯರೆನ್ಸ್ ನೀಡಲಿರುವ ಅಧಿಕಾರಿಗಳು.
ಇಷ್ಟೆಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕವಷ್ಟೇ ಪ್ರಜ್ವಲ್​ ರೇವಣ್ಣ ಬಂಧನ ಸಾಧ್ಯ ಎನ್ನಲಾಗಿದೆ. ಕೊನೆ ಕ್ಷಣದಲ್ಲಿ ಯಾವುದಾದರೂ ನಿಯಮಗಳ ಅಡಿಯಲ್ಲಿ ಪ್ರಜ್ವಲ್​ ಬಂಧನದಿಂದ ಬಚಾವ್​ ಆಗುವ ಸಾಧ್ಯತೆಗಳೂ ಇವೆ ಎನ್ನಲಾಗುತ್ತಿದೆ.



Join Whatsapp