ಪ್ರಜ್ವಲ್‌ ರೇವಣ್ಣ ವಿದೇಶದಿಂದ ಮಾಡಿದ ವೀಡಿಯೊ ನಿರ್ದೇಶಕ ಅಮಿತ್‌ ಶಾ ಆಗಿರಬೇಕು: ಪ್ರಿಯಾಂಕ್ ಖರ್ಗೆ

Prasthutha|

ಬೆಂಗಳೂರು: ವಿದೇಸಕ್ಕೆ ಪಲಸಯನಗೈದು ಒಂದು ತಿಂಗಳ ಬಳಿಕ ಸಂಸದ ಪ್ರಜ್ವಲ್‌ ರೇವಣ್ಣ ವೀಡಿಯೋ ಮಾಡಿ ಹೇಳಿಕೆ ನೀಡಿದ್ದು, ಇದರ ನಿರ್ದೇಶಕರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇರಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

- Advertisement -

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧದ ಇಷ್ಟು ದೊಡ್ಡ ಪ್ರಕರಣಕ್ಕೆ ಸ್ಪಂದಿಸಲು ಇವರಿಗೆ 30 ದಿನ ಬೇಕಿತ್ತಾ, ಕುಂಭಕರ್ಣ ನಿದ್ರೆಯಿಂದ ಎದ್ದು ರಾಹುಲ್‌ ಗಾಂಧಿಯವರ ಜೊ ಮಾಡಿದರೆ ಹೇಗೆ? ಇಡೀ ದೇಶದ ರಾಜಕಾರಣಿಗಳು ಪ್ರಜ್ವಲ್‌ ಬಗ್ಗೆ ಮಾತನಾಡಿದ್ದಾರೆ. ಅಮಿತ್ ಶಾ ಮಾತ್ರ ರಾಹುಲ್‌ ಗಾಂಧಿ ಬಗ್ಗೆ ಮಾತಾಡುತ್ತಿದ್ದಾರೆ. ಅಂದರೆ ಪ್ರಜ್ವಲ್ ರೇವಣ್ಣ ತಿಂಗಳ ಬಳಿಕ ಕಳುಹಿಸಿದ ವೀಡಿಯೋದ ನಿರ್ದೇಶಕರು ಅಮಿತ್‌ ಶಾ ಆಗಿರಬೇಕಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರೋಪಿ ಪ್ರಜ್ವಲ್ ರೇವಣ್ಣ ಸಲೂನ್‌ಗೆ ಹೋಗಿ ಕ್ಲೀನ್‌ ಆಗಿ ಬಂದು ವೀಡಿಯೋ ಮಾಡಿದ್ದಾರೆ. ಅದರಲ್ಲಿ ಖನ್ನತೆ ಏನಾದರೂ ಕಾಣುತ್ತಿದೆಯೇ? ಇವರಿಗೆ ಖನ್ನತೆಯಾಗಿದೆ ಎಂದಾದರೆ, ಸಂತ್ರಸ್ತೆಯರ ಪರಿಸ್ಥಿತಿ ಏನು? ಅಮಿತ್‌ ಶಾ ವೀಡಿಯೋ ಮಾಡಿ ಹೊರಗೆ ಬಾ ಅಂದಿರಬೇಕು. ಇದೆಲ್ಲವೂ ಬಿಜೆಪಿ ನಾಯಕರ ನಿರ್ದೇಶನದ ಮೇರೆಗೆ ನಡೆದಿದೆ ಎಂದು ಸಚಿವರು ಹೇಳಿದರು.



Join Whatsapp