ಪ್ರಜ್ವಲ್ ರೇವಣ್ಣ ಅನೇಕ ಮಹಿಳೆಯರ ಮೇಲೆ ಬಲತ್ಕಾರ ಮಾಡಿದ್ದಾರೆ: ಅಲ್ಕಾ ಲಂಬಾ

Prasthutha|

ಬೆಂಗಳೂರು: ನಾರಿ ನ್ಯಾಯ ಕಾರ್ಯಕ್ರಮ ಘೋಷಿಸಿದ್ದೇವೆ, ಆದರೆ ದುರ್ದೈವ ಅಂದರೆ ಕರ್ನಾಟಕದಲ್ಲಿ ಮಹಿಳೆಯರ ಸಾಮೂಹಿಕ ಬಲತ್ಕಾರ ನಡೆದಿದೆ. ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಬರೀ ಒಬ್ಬ ಮಹಿಳೆಯರ ಮೇಲೆ ಅಲ್ಲ, ಅನೇಕ ಮಹಿಳೆಯರ ಮೇಲೆ ಬಲತ್ಕಾರ ಮಾಡಿದ್ದಾರೆ ಎಂದು ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಆಕ್ರೋಶ ವ್ಯಕ್ತಪಡಿಸಿದರು.

- Advertisement -


ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಪರಿವಾರದಿಂದ ಇಂತಹ ಕೆಲಸ ಆಗಿದೆ. ಆದರೆ ಪ್ರಧಾನಿ ಮೋದಿ ಅವರು ಈ ಬಗ್ಗೆ ಏನೂ ಮಾತನಾಡುತ್ತಿಲ್ಲ ಎಂದರು.


ಸುಮಾರು 3000 ವಿಡಿಯೋಗಳು ಹಾಸನದಲ್ಲಿ ಹರಿದಾಡುತ್ತಿವೆ. ಅವರ ಅಜ್ಜ ದೇಶದ ಪ್ರಧಾನಿಯಾಗಿದ್ದವರು. ಅವರ ಚಿಕ್ಕಪ್ಪ ಮಾಜಿಮುಖ್ಯಮಂತ್ರಿಯಾಗಿದ್ದರು. ಇಂತವರ ಕುಟುಂಬದಲ್ಲಿ ಈರೀತಿ ನಡೆದಿದೆ. ಎಸ್ಟಿಐ ತನಿಖೆಗೆ ಕೊಡಲಾಗಿದೆ. ಮಹಿಳಾ ಆಯೋಗ ದೂರು ದಾಖಲಿಸಿದೆ. ಇಷ್ಟಾದ್ರೂ ಮೊದಲು ಎಫ್ಐಆರ್ ದಾಖಲಿಸಿಲ್ಲ. ದೇಶದಲ್ಲಿ ಎಲ್ಲೂ ಇದರ ಬಗ್ಗೆ ಮಾತಿಲ್ಲ. ಆರೋಪಿ ವಿದೇಶಕ್ಕೆ ಹೋಗುತ್ತಾನೆ ಅಂದರೆ ಹೇಗೆ? ಪ್ರಜ್ವಲ್ ಗಂಭೀರ ಕೃತ್ಯ ಎಸಗಿದ್ದಾರೆ. ಅವರ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಬೇಕು ಎಂದು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಂಬಾ ಆಗ್ರಹಿಸಿದರು.



Join Whatsapp