ಪ್ರಜ್ವಲ್ ರೇವಣ್ಣ ಈಗ ವಿಚಾರಣಾಧೀನ ಖೈದಿ ನಂ 5664

Prasthutha|

ಬೆಂಗಳೂರು: ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಕೋರ್ಟ್​ ನ್ಯಾಯಾಂಗ ಬಂಧನ ವಿಧಿಸಿದ್ದು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವರಿಗೆ ಖೈದಿ ಸಂಖ್ಯೆ 5664 ನೀಡಲಾಗಿದೆ. ಮಹಿಳೆಯ ಅಪಹರಣ ಪ್ರಕರಣದಲ್ಲಿ ಪ್ರಜ್ವಲ್ ತಂದೆ, ಹೊಳೆನರಸೀಪುರ ಶಾಸಕ ಎಚ್​ಡಿ ರೇವಣ್ಣಗೆ ವಿಚಾರಣಾಧೀನ ಖೈದಿ ಸಂಖ್ಯೆ 4567 ನೀಡಲಾಗಿತ್ತು.

- Advertisement -

ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಕ್ವಾರೆಂಟೈನ್ ಸೆಲ್ ನಲ್ಲಿದ್ದಾರೆ. ಇಂದಿನ ರಾತ್ರಿ ಊಟವನ್ನು ಸಹ ಜೈಲಾಧಿಕಾರಿಗಳು ನೀಡಿದ್ದಾರೆ. ರಾತ್ರಿ ಜೈಲಿನ ಮೆನುವಿನಂತೆ ಮುದ್ದೆ, ಅನ್ನ, ಸಾಂಬರು, ಪಲ್ಯ ನೀಡಲಾಗಿದೆ. ಜೈಲಿನ ಕ್ವಾರೆಂಟೈನ್ ಬ್ಯಾರಕ್‌ನಲ್ಲಿ ಮೌನಕ್ಕೆ ಶರಣಾಗಿದ್ದಾರೆ.

Join Whatsapp