ಪ್ರಜ್ವಲ್‌ ರೇವಣ್ಣರನ್ನು ಸದ್ಯದಲ್ಲೇ ಪುರುಷತ್ವ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ

Prasthutha|

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣರನ್ನು ಸದ್ಯದಲ್ಲೇ ಪುರುಷತ್ವ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

- Advertisement -

ಅಶ್ಲೀಲ ವೀಡಿಯೋದಲ್ಲಿರುವುದು ನಾನಲ್ಲ, ಅತ್ಯಾಚಾರ ಎಸಗಿಲ್ಲ ಮುಂತಾಗಿ ಪ್ರಜ್ವಲ್ ಅಫಿದವಿತ್‌ ಸಲ್ಲಿಸಿದರೆ ಪುರುಷತ್ವ ಪರೀಕ್ಷೆ ನಡೆಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಅತ್ಯಾಚಾರ ಪ್ರಕರಣದಲ್ಲಿ ಈ ಹಿಂದೆ ಸ್ವಾಮಿ ನಿತ್ಯಾನಂದ, ಮುರುಘಾ ಶ್ರೀ ಸಹಿತ ಕೆಲವು ಆರೋಪಿಗಳಿಗೆ ಪುರುಷತ್ವ ಪರೀಕ್ಷೆ ನಡೆಸಲಾಗಿತ್ತು.

- Advertisement -

ಹಾಸನದ ಪ್ರಜ್ವಲ್‌ ನಿವಾಸದಿಂದ ಈಗಾಗಲೇ ಎಸ್‌ಐಟಿ ಅಧಿಕಾರಿಗಳು ಸಂಸದರು ಬಳಸುತ್ತಿದ್ದ ಹಾಸಿಗೆ, ಹೊದಿಕೆ ಇತ್ಯಾದಿ ವಸ್ತುಗಳಲ್ಲಿದ್ದ ಡಿಎನ್‌ಎಗೂ ಪ್ರಜ್ವಲ್‌ ಡಿಎನ್‌ಎಗೂ ಹೋಲಿಕೆ ಮಾಡಿ ವೈಜ್ಞಾನಿಕ ಸಾಕ್ಷ್ಯ ಸಂಗ್ರಹಿಸುವ ಸಾಧ್ಯತೆಗಳಿವೆ.



Join Whatsapp