ಚಂದ್ರನ ಮೇಲೆ ಆಮ್ಲಜನಕ ಮತ್ತು ಇತರ ಮೂಲಧಾತು ಪತ್ತೆ; ಹೈಡ್ರೋಜನ್​​ಗಾಗಿ ಹುಡುಕಾಟ: ಇಸ್ರೋ

Prasthutha|

ಹೊಸದಿಲ್ಲಿ: ಪ್ರಗ್ಯಾನ್ ರೋವರ್‌ನ ಲೇಸರ್-ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ ದಕ್ಷಿಣ ಧ್ರುವದ ಬಳಿ ಚಂದ್ರನ ಮೇಲ್ಮೈಯಲ್ಲಿ ಗಂಧಕದ ಉಪಸ್ಥಿತಿಯನ್ನು ಮೊದಲ ಬಾರಿಗೆ ಮಾಪನಗಳ ಮೂಲಕ ದೃಢಪಡಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮಂಗಳವಾರ ಹೇಳಿದೆ.

- Advertisement -

ರೋವರ್‌ನ ಸ್ಪೆಕ್ಟ್ರೋಸ್ಕೋಪ್ ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಫೆರಸ್ (ಕಬ್ಬಿಣ), ಕ್ರೋಮಿಯಂ, ಟೈಟಾನಿಯಂ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಆಮ್ಲಜನಕವನ್ನು ನಿರೀಕ್ಷಿಸಿದಂತೆ ಪತ್ತೆ ಮಾಡಿದೆ ಎಂದು ಇಸ್ರೋ ಹೇಳಿದೆ. ಇದೀಗ ಹೈಡ್ರೋಜನ್​​ಗಾಗಿ ಹುಡುಕಾಟ ನಡೆಯುತ್ತಿದೆ.

ಪ್ರಾಥಮಿಕ ವಿಶ್ಲೇಷಣೆಗಳನ್ನು ಗ್ರಾಫ್ ಮೂಲಕ ನಿರೂಪಿಸಲಾಗಿದೆ. ಚಂದ್ರನ ಮೇಲ್ಮೈಯಲ್ಲಿ ಅಲ್ಯೂಮಿನಿಯಂ (Al), ಸಲ್ಫರ್ (S), ಕ್ಯಾಲ್ಸಿಯಂ (Ca), ಕಬ್ಬಿಣ (Fe), ಕ್ರೋಮಿಯಂ (Cr), ಮತ್ತು ಟೈಟಾನಿಯಂ (Ti) ಇರುವಿಕೆಯನ್ನು ಅನಾವರಣಗೊಳಿಸಿದೆ. ಹೆಚ್ಚಿನ ಮಾಪನಗಳು ಮ್ಯಾಂಗನೀಸ್ (Mn), ಸಿಲಿಕಾನ್ (Si), ಮತ್ತು ಆಮ್ಲಜನಕ (O) ಇರುವಿಕೆಯನ್ನು ಬಹಿರಂಗಪಡಿಸಿವೆ. ಹೈಡ್ರೋಜನ್ ಇರುವಿಕೆಯ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಇಸ್ರೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Join Whatsapp