ತನ್ನ ಕಬಡ್ಡಿ ಆಟದ ವೀಡಿಯೋವನ್ನು ವೈರಲ್ ಮಾಡಿದ ವ್ಯಕ್ತಿಯನ್ನು ರಾವಣನಿಗೆ ಹೋಲಿಸಿದ ಸಂಸದೆ ಪ್ರಜ್ಞಾಸಿಂಗ್ ಠಾಕೂರ್

Prasthutha|

ಭೋಪಾಲ್: ಕಬಡ್ಡಿ ಆಡುವ ತನ್ನ ವೀಡಿಯೋವನ್ನು ಸಾಮಾಜಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ವ್ಯಕ್ತಿಯನ್ನು ಭೋಪಾಲ್ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ರಾವಣನಿಗೆ ಹೋಲಿಸಿ ಹೇಳಿಕೆ ನೀಡಿದ್ದಾರೆ. ಮಾತ್ರವಲ್ಲ ಆತನ ವೃದ್ಧಾಪ್ಯ ಮತ್ತು ಮುಂದಿನ ಜನ್ಮ ಹಾಳಾಗಲಿದೆ ಎಂದು ತಿಳಿಸಿದರು.

- Advertisement -

ಕ್ಯಾನ್ಸರ್ ಪೀಡಿತೆಯಾಗಿ ದೀರ್ಘಕಾಲದಿಂದ ಗಾಲಿಕುರ್ಚಿಗೆ ಸೀಮಿತವಾಗಿದ್ದ ಸಂಸದೆ ಅನಾರೋಗ್ಯ ಸಮಸ್ಯೆಯಿಂದಾಗಿ 2008 ರಲ್ಲಿ ಮಾಲೆಂಗಾವ್ ಸ್ಪೋಟ ಪ್ರಕರಣದಲ್ಲಿ ಜಾಮೀನು ಮೇಲೆ ಬಿಡುಗಡೆಗೊಂಡಿದ್ದರು.

ಅವರು ಸಿಂಧಿ ಸಮುದಾಯದ ಪ್ರಾಬಲ್ಯವಿರುವ ಭೋಪಾಲ್ ನ ಸಂತ ನಗರದಲ್ಲಿ ನಡೆದ ದಸರಾ ಕಾರ್ಯಕ್ರಮದಲ್ಲಿ ಠಾಕೂರ್ ಅವರು ಮಾತನಾಡುತ್ತಿದ್ದರು.

- Advertisement -

ಎರಡು ದಿನಗಳ ಹಿಂದೆ ದುರ್ಗಾ ಪೆಂಡಲ್ ನಲ್ಲಿ ಆರತಿ ನೀಡಲು ತೆರಳಿದ್ದ ವೇಳೆ ಕ್ರೀಡಾಪಟುಗಳ ಮನವಿ ಮೇರೆಗೆ ಕಬಡ್ಡಿ ಆಟವಾಡಿದ್ದೇನೆ. ಈ ಸಂದರ್ಭದಲ್ಲಿ ಸಣ್ಣ ವೀಡಿಯೋ ತುಣುಕೊಂದನ್ನು ಸೆರೆಹಿಡಿದು ಸಾಮಾಜಿಕ ತಾಣಗಳಲ್ಲಿ ಹರಿಯಬಿಡಲಾಗಿದೆ. ನನ್ನ ಮೇಲೆ ಕೋಪ ಅಥವಾ ಅಸೂಯೆಯ ರಾವಣ ಗುಣದ ವ್ಯಕ್ತಿಯೋರ್ವ ಈ ಕೃತ್ಯ ಎಸಗಿದ್ದಾನೆ ಎಂದು ಗುಡುಗಿದರು. ಸಿಂಧಿ ಸಮುದಾಯಕ್ಕೆ ಸೇರಿದ ಆ ವ್ಯಕ್ತಿಗೆ ನಾನು ಏನು ತೊಂದರೆ ನೀಡಿದ್ದೇನೆ ಎಂದು ತಿಳಿಯುತ್ತಿಲ್ಲ ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವೀಡಿಯೋದಲ್ಲಿ ಠಾಕೂರ್ ಕಾಳಿ ದೇವಸ್ಥಾನದ ಆವರಣದಲ್ಲಿ ಕಬಡ್ಡಿ ಆಡುತ್ತಿರುವುದು ಕಂಡುಬಂದಿದೆ. ಮಾತ್ರವಲ್ಲ ಈ ಹಿಂದೆ ನವರಾತ್ರಿ ಉತ್ಸವದಲ್ಲಿ ಆಕೆ ಗರ್ಬಾ ನೃತ್ಯದಲ್ಲಿ ಭಾಗವಹಿಸಿದ ವೀಡಿಯೋ ಬಹಿರಂಗವಾಗಿತ್ತು.

ಈ ಮಧ್ಯೆ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ಬೆನ್ನುಮೂಳೆ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಆಕೆಯ ಸಹೋದರಿ ಉಪ್ಮಾ ಠಾಕೂರ್ ಎಂದು ಈ ಹಿಂದೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದರು. ಮಹಾರಾಷ್ಟ್ರದ ಎ.ಟಿ.ಎಸ್ ತನಿಖಾಧಿಕಾರಿಗಳು ವಿಚಾರಣೆಯ ನೆಪದಲ್ಲಿ ಆಕೆಯನ್ನು ನೆಲೆಕ್ಕೆ ಎಸೆದು ದೌರ್ಜನ್ಯ ನಡೆಸಿದ ಕಾರಣ ಆಕೆಯ ಬೆನ್ನುಮೂಳೆ ಮುರಿದು ಸಮಸ್ಯೆ ಅನುಭವಿಸುತ್ತಿದ್ದಾಳೆ ಎಂದು ಆರೋಪಿಸಿದ್ದರು.

ಮತ್ತೊಂದೆಡೆ ಮಧ್ಯಪ್ರದೇಶ ಕಾಂಗ್ರೆಸ್ ಮುಖಂಡರು ಪ್ರಜ್ಞಾ ಠಾಕೂರ್ ಮೇಲೆ ವಾಗ್ದಾಳಿ ನಡೆಸಿದ್ದು, ಆಕೆ ತನ್ನ ಹಲವಾರು ಮುಖಗಳನ್ನು ಅನಾವರಣ ಗೊಳಿಸುತ್ತಿದ್ದಾಳೆ ಎಂದು ಆರೋಪಿಸಿದೆ. ಕೆಲವೊಮ್ಮೆ ಆಕೆ ಗಾಲಿಕುರ್ಚಿಯಲ್ಲಿ ಕಾಣಿಸಿಕೊಂಡರೆ, ಮತ್ತೊಮ್ಮೆ ಗರ್ಬಾ ನೃತ್ಯ, ಬಾಸ್ಕೆಟ್ ಬಾಲ್ ಮತ್ತು ಕಬಡ್ಡಿ ಆಟದ ಮೈದಾನದಲ್ಲಿ ಪ್ರತ್ಯಕ್ಷವಾಗುತ್ತಿದ್ದಾಳೆ ಎಂದು ಕುಟುಕಿದೆ.

Join Whatsapp