ತುಮಕೂರು: ದಲಿತ ಅರ್ಚಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಸವರ್ಣೀಯರು

Prasthutha|

ತುಮಕೂರು: ದೇವಸ್ಥಾನದಲ್ಲಿ ಪೂಜೆ ಮಾಡುವ ದಲಿತ ಅರ್ಚಕನ ಮೇಲೆ ಜಾತ್ರೆಯಂದು ಸವರ್ಣೀಯರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ನಡೆದಿದೆ.

- Advertisement -

ತಾಲೂಕಿನ ಬಿದರೆಗುಡಿ ಗ್ರಾಮದಲ್ಲಿರುವ ಮುಜರಾಯಿ ಇಲಾಖೆಗೆ ಸೇರಿದ ಬಿದರೆಗುಡಿಯ ಬಿದಿರಾಂಬಿಕ ಹಾಗೂ ಚಿಕ್ಕಮ್ಮ ದೇವಿಯ ದೇವಸ್ಥಾನದ ಅರ್ಚಕ ಲಿಂಗರಾಜು ಮೇಲೆ ಸವರ್ಣೀಯರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಸ್ಥಳಕ್ಕೆ ಹೊನ್ನವಳ್ಳಿ, ತಿಪಟೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಬಿದಿರಾಂಬಿಕ ಹಾಗೂ ಚಿಕ್ಕಮ್ಮ ದೇವಿಯ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ದೇವಿಯ ಬ್ರಹ್ಮ ರಥೋತ್ಸವ ನಡೆದಿದೆ. ಆದರೆ ಈ ರಥೋತ್ಸವದ ವೇಳೆ ಅರ್ಚಕನನ್ನು ದೇವಸ್ಥಾನಕ್ಕೆ ಕರೆಸಿ ಹಲ್ಲೆ ನಡೆಸಲಾಗಿದ್ದು, ಹಲ್ಲೆಗೆ ಒಳಗಾದ ಅರ್ಚಕನಿಗೆ ಚಿಕಿತ್ಸೆ ಪಡೆಯಲು ಬಿಡದ ಆರೋಪವೂ ಕೇಳಿಬಂದಿದೆ.

- Advertisement -

ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Join Whatsapp