ಕಾರ್ಕಳ ಬಿಜೆಪಿ ಕಚೇರಿಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ: ತ್ರಿವರ್ಣ ಧ್ವಜಕ್ಕಿಂತ ಎತ್ತರದಲ್ಲಿ ಬಿಜೆಪಿ ಧ್ವಜ!

Prasthutha|

ಮಂಗಳೂರು: ಇಂಧನ ಸಚಿವ ಸುನೀಲ್ ಕುಮಾರ್ ಸ್ವ ಕ್ಷೇತ್ರ ಕಾರ್ಕಳ ಬಿಜೆಪಿ ಕಚೇರಿಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನವ ಮಾಡಿರುವ ಘಟನೆ ನಡೆದಿದೆ.

ಕಾರ್ಕಳ ಬಿಜೆಪಿ ಕಚೇರಿಯಲ್ಲೇ ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಬಿಜೆಪಿಯ ಧ್ವಜವನ್ನು ಹಾರಿಸಿ ಧ್ವಜಸಂಹಿತೆಯನ್ನು ಉಲ್ಲಂಘಿಸಲಾಗಿದೆ.

- Advertisement -

ಬಿಜೆಪಿ ಧ್ವಜವನ್ನು ಎತ್ತರದ ಕಬ್ಬಿಣದ ಕಂಬದಲ್ಲಿ ಕಟ್ಟಿದ್ದರೆ, ರಾಷ್ಟ್ರಧ್ವಜವನ್ನು ಕೊಳಚೆ ನೀರು ಹರಿಯುವ ಪೈಪ್ ಗೆ ಕಟ್ಟಲಾಗಿದೆ. ಇದರ ಫೋಟೋ ಕೂಡ ವೈರಲ್ ಆಗಿದೆ.

ಮನೆ ಮನೆಯಲ್ಲಿ ಬಾವುಟ ಹರಿಸಿ ಎಂದು ಬೀದಿಗಳಲ್ಲಿ ಕೂಗಾಡಿ ಬಿಟ್ಟಿ ಪ್ರಚಾರ ಮಾಡುವ ಬಿಜೆಪಿ ನಾಯಕರು ರಾಷ್ಟ್ರಧ್ವಜಕ್ಕೆ ಕೊಡುವ ಮರ್ಯಾದೆ ನೋಡಿ ಇದೇನಾ ಎಂದು ಸಾರ್ವಜನಿಕರು ಸಾಮಾಜಿಕ ಮಾಧ್ಯಮಗಳಲ್ಲಿ ಕಿಡಿಕಾರಿದ್ದಾರೆ.

- Advertisement -