ನವದೆಹಲಿ: ಮುಂಗಾರು ಅಧಿವೇಶನ ಇಂದಿನಿಂದ ಆರಂಭಗೊಂಡಿದ್ದು, ಇಂದೇ ರಾಷ್ಟ್ರಪತಿ ಚುನಾವಣೆ ಇರುವ ಕಾರಣಕ್ಕೆ ಲೋಕಸಭೆಯನ್ನು ಮಧ್ಯಾಹ್ನದವರೆಗೆ ಮತ್ತು ರಾಜ್ಯಸಭೆಯನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಯಿತು.
ರಾಜನಾಥ್ ಸಿಂಗ್ ಸುಗಮ ಕಲಾಪಕ್ಕೆ ಮನವಿ ಮಾಡಿಕೊಂಡರು. ಆದರೆ ಮಧ್ಯಾಹ್ನ 2 ಗಂಟೆಗೆ ಲೋಕ ಸಭೆ ಆರಂಭವಾಗುತ್ತಲೇ ಅಗ್ನಿಪಥ ನೇಮಕಾತಿಯನ್ನು ಪ್ರಶ್ನಿಸಲು ಪ್ರತಿಪಕ್ಷಗಳು ತಯಾರಿ ಮಾಡಿಕೊಂಡಿವೆ.
ರಾಷ್ಟ್ರಪತಿ ಚುನಾವಣೆ ಮತದಾನ ನಡೆಯುತ್ತಿದ್ದು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ವ್ಹೀಲ್ ಚೇರಿನಲ್ಲಿ ಬಂದು ಮತ ಚಲಾಯಿಸಿದರು ಎಂದು ವರದಿಯಾಗಿದೆ.