ಗ್ರಾಹಕರು ಫಿಕ್ಸೆಡ್ ಡೆಪಾಸಿಟ್‌ ಇಟ್ಟಿದ್ದ 1 ಕೋಟಿ ರೂ.ವನ್ನು IPL ಬೆಟ್ಟಿಂಗ್‌ ನಲ್ಲಿ ಕಳೆದ ಪೋಸ್ಟ್‌ ಮಾಸ್ಟರ್!

Prasthutha|

ಭೋಪಾಲ್ : ಸುಮಾರು 24 ಕುಟುಂಬಗಳು ಫಿಕ್ಸೆಡ್‌ ಡೆಪಾಸಿಟ್‌ ಇರಿಸಿದ್ದ 1 ಕೋಟಿ ರೂ. ಹಣವನ್ನು ಪೋಸ್ಟ್‌ ಮಾಸ್ಟರ್‌ ಐಪಿಎಲ್‌ ಬೆಟ್ಟಿಂಗ್‌ ನಲ್ಲಿ ಕಳೆದುಕೊಂಡ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

- Advertisement -

ಸಾಗರ್‌ ಜಿಲ್ಲೆಯ ಬಿನಾ ಸಬ್‌ ಪೋಸ್ಟ್‌ ಆಫೀಸ ಪೋಸ್ಟ್‌ ಮಾಸ್ಟರ್‌ ವಿಶಾಲ್‌ ಅಶ್ವೀರ್‌ ಅವರನ್ನು ಪೊಲೀಸರು ಮೇ 20 ರಂದು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಸತ್ಯ ಬಾಯಿ ಬಿಟ್ಟಿದ್ದಾನೆ. ನಕಲಿ ಖಾತೆಗಳನ್ನು ತೆರೆಯಲು ಅಂಚೆ ಕಚೇರಿಯ ಅಸಲಿ ಪಾಸ್‌ ಬುಕ್‌ ಗಳನ್ನೇ ಪೋಸ್ಟ್‌ ಮಾಸ್ಟರ್‌ ವಿಶಾಲ್‌ ಅಶ್ವೀರ್‌ ಬಳಸಿದ್ದು, ಖಾತೆಯಲ್ಲಿ ಜಮಾ ಮಾಡಲು ನೀಡಿದ್ದ ಎಲ್ಲಾ ಹಣವನ್ನು ಐಪಿಎಲ್‌ ಬೆಟ್ಟಿಂಗ್‌ ಗೆ ಬಳಸಿದ್ದನ್ನು ಬಾಯಿಬಿಟಿದ್ದಾನೆ.

ಎರಡು ವರ್ಷಗಳಿಂದ ಐಪಿಎಲ್‌ ನಲ್ಲಿ ಬೆಟ್ಟಿಂಗ್‌ ಗೆ ಜನರ ಹಣವನ್ನು ಬಳಸಿದ್ದನು ಎಂದು ತಿಳಿದು ಬಂದಿದ್ದು, ಬಿನಾ ಪೊಲೀಸ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

Join Whatsapp