8 ವರ್ಷಗಳಿಂದ ಪೋಸ್ಟ್ ಡೆಲಿವರಿ ಮಾಡದ ಪೋಸ್ಟ್ ಮ್ಯಾನ್: ಕೆರೆಯಲ್ಲಿ ರಾಶಿ ಬಿದ್ದಿರುವ ಎಟಿಎಂ, ಆಧಾರ್

Prasthutha|

ಕನಕಗಿರಿ: ಕಳೆದ ಎಂಟು ವರ್ಷಗಳಿಂದ ಪೋಸ್ಟ್ ಮ್ಯಾನ್ ಒಬ್ಬ, ಒಂದೂ ಅಂಚೆಪತ್ರಗಳನ್ನು ಸಂಬಂಧಿಸಿದವರ ಮನೆಗೆ ತಲುಪಿಸದ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಗೌರಿಪುರ ಗ್ರಾಮದಲ್ಲಿ ನಡೆದಿದೆ.

- Advertisement -

ಪೋಸ್ಟ್ ಮ್ಯಾನ್ ವಿನಯಾ ಎಂಬಾತ ಅಂಚೆ ಪತ್ರಗಳನ್ನು ಸಂಬಂಧಪಟ್ಟವರಿಗೆ ತಲುಪಿಸದೆ ಮೂಟೆ ಕಟ್ಟಿ ಊರಾಚೆ ಎಸೆದಿದ್ದಾನೆ. ಈತನ ವಿರುದ್ಧ  ಕ್ರಮ ಕೈಗೊಳ್ಳಬೇಕಿದ್ದ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಅಂಚೆಪತ್ರಗಳನ್ನು ಜನ ಹುಡುಕಿದಾಗ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ರಾಶಿ ರಾಶಿ ಪತ್ರಗಳನ್ನು ಕೆದಕಿ ಹುಡುಕುತ್ತಿರುವ ದೃಶ್ಯಗಳು  ಕಂಡು ಬಂದಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಗೌರಿಪುರ ಅಂಚೆ ಕಚೇರಿ ವ್ಯಾಪ್ತಿಯ ಬಸರಿಹಾಳ, ಬೈಲಕ್ಕಂಪುರ, ದೇವಲಾಪೂರ ಮತ್ತು ಚಿಕ್ಕ ವಡ್ಡರಕಲ್ ಗ್ರಾಮಗಳಿಗೆ ಈತ ಅಂಚೆ ಪತ್ರಗಳನ್ನು ವಿತರಣೆ ಮಾಡಬೇಕಿದ್ದು ಸರ್ಕಾರದಿಂದ ತಿಂಗಳು  ಸಂಬಳ ಪಡೆಯುತ್ತಿದ್ದ ವಿನಯ್, ಸಂಬಂಧಪಟ್ಟ ವಿಳಾಸಕ್ಕೆ ತಲುಪಿಸಬೇಕಿದ್ದ ವಿವಿಧ ದಾಖಲಾತಿ, ಆಧಾರ್ ಕಾರ್ಡ್, ಮಾಸಾಶನ ಆದೇಶ ಪತ್ರ, ಲೋನ್ ನೋಟಿಸ್ಗಳನ್ನು ಡೆಲಿವರಿ ಮಾಡುವ ಬದಲಿಗೆ ಮೂಟೆಕಟ್ಟಿ ಊರಾಚೆ ಎಸೆದಿದ್ದಾನೆ. ಮಕ್ಕಳು ಆಟವಾಡುವಾಗ ಮೂಟೆ ತೆಗೆದು ನೋಡಿದ್ದು,  ಅಂಚೆ ವಿತರಕನ ಬಂಡವಾಳ ಬಯಲಾಗಿದೆ.

- Advertisement -

ಕಳೆದ 10 ವರ್ಷಗಳ ಹಿಂದೆ ಗೌರಿಪುರ ಗ್ರಾಮದಲ್ಲಿ ಅಂಚೆ ವಿತರಕನಾಗಿ  ಕೆಲಸಕ್ಕೆ ಸೇರಿದ ಆರಂಭದ ಎರಡು ವರ್ಷ ಮಾತ್ರ ಸರಿಯಾಗಿ ಕೆಲಸ ಮಾಡಿದ್ದು ಕಳೆದ 8 ವರ್ಷದಿಂದ ಯಾವುದೇ ಅಂಚೆ ಪತ್ರಗಳನ್ನು ಡೆಲಿವರಿ  ಮಾಡಿಲ್ಲ ಎಂದು  ಸಾರ್ವಜನಿಕರ ಆರೋಪಿಸಿದ್ದಾರೆ. ತಮಗೆ ಕಳೆದ 8 ವರ್ಷಗಳಿಂದ ತಲುಪಬೇಕಿದ್ದ ಅಂಚೆ ಕಚೇರಿಗೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಎಟಿಎಂ ಕಾರ್ಡ್, ಬ್ಯಾಂಕ್ ಚೆಕ್ ಬುಕ್, ವಿವಿಧ ಮಾಸಾಶನಗಳ ಆದೇಶ ಪತ್ರ, ಸರ್ಕಾರಿ ನೌಕರರ ಜಾಯಿನಿಂಗ್ ಲೆಟರ್, ಎಲ್ ಐಸಿ ಪಾಲಿಸಿಯ ನೋಟಿಸ್, ಚಿನ್ನದ ಮೇಲಿನ ಸಾಲದ ಹರಾಜು ನೋಟೀಸ್ ಗಳು ಈಗ ಕೆರೆಯಲ್ಲಿ  ಕಂಡು ಆಕ್ರೋಶಗೊಂಡಿದ್ದಾರೆ. ನೋಟೀಸ್ ತಲುಪದ ಹಿನ್ನೆಲೆ ಅದೆಷ್ಟೋ ಜನ ತಮ್ಮ ಚಿನ್ನ ಕಳೆದುಕೊಂಡಿದ್ದು ಕೆಲವರು ಮಾಸಾಶನದಿಂದ ವಂಚಿತರಾಗಿದ್ದಾರೆ.



Join Whatsapp