ಪಣಜಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಚಿತ್ರಗಳಿದ್ದ ಹಲವು ಫಲಕಗಳನ್ನು ಗೋವಾದಲ್ಲಿ ಬಿಜೆಪಿ ಕಾರ್ಯಕರ್ತರು ವಿರೂಪಗೊಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ತೃಣಮೂಲ ಕಾಂಗ್ರೆಸ್, ಇದು ಬಿಜೆಪಿಯ ‘ಅಸಹಿಷ್ಣುತೆ’ಯನ್ನು ಬಿಂಬಿಸುತ್ತದೆ ಎಂದು ಕೃತ್ಯವನ್ನು ತೀವ್ರವಾಗಿ ಖಂಡಿಸಿದೆ.
ಮುಂದಿನ ವರ್ಷ ನಡೆಯಲಿರುವ ಗೋವಾ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಟಿಎಂಸಿ ಪ್ರಕಟಿಸಿದ್ದು, ಅದರ ತಯಾರಿಗಾಗಿ ಮಮತಾ ಬ್ಯಾನರ್ಜಿ ಶುಕ್ರವಾರ ಗೋವಾಗೆ ಭೇಟಿ ನೀಡಲಿದ್ದಾರೆ.
ಮಮತಾ ಬ್ಯಾನರ್ಜಿಯವರ ಗೋವಾ ಭೇಟಿಗೂ ಮುನ್ನ ಅವರ ಚಿತ್ರಗಳಿದ್ದ ಹಲವಾರು ಪೋಸ್ಟರ್ಗಳು ಮತ್ತು ಫಲಕಗಳನ್ನು ಧ್ವಂಸಗೊಳಿಸಲಾಗಿದೆ ಎಂದು ವರದಿಯಾಗಿದೆ.