ರಾಜಧಾನಿಯ ಎಲ್ಲೆಲ್ಲೂ ‘ಸೋಂಕಿತ ಸರ್ಕಾರ’ ಪೋಸ್ಟರ್ ಗಳು । ಬಿಜೆಪಿ ಸರಕಾರದ ವಿರುದ್ಧ ರಾತ್ರೋ ರಾತ್ರಿ ಪ್ರತ್ಯಕ್ಷವಾಯಿತು ಸಾವಿರಾರು ಭಿತ್ತಿಪತ್ರಗಳು !!

Prasthutha|

ಬೆಂಗಳೂರು : ಸೆಪ್ಟಂಬರ್ 21 ರ ಮಧ್ಯರಾತ್ರಿ ಬೆಂಗಳೂರಿನ ಹಲವು ಕಡೆಗಳ ಗೋಡೆಗಳಲ್ಲಿ ‘ಸೋಂಕಿತ ಸರ್ಕಾರ’ ಎಂಬ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ. ಆ ಭಿತ್ತಿಪತ್ರಗಳಲ್ಲಿ  “ಹಣದಿಂದ, ಹಣಕ್ಕಾಗಿ, ಹಣಕ್ಕೋಸ್ಕರ ಅಧಿಕಾರಕ್ಕೆ ಬಂದ ಸೋಂಕಿನ ಸರ್ಕಾರ” ಎಂದು ಬರೆಯಲಾಗಿದೆ. ಮೇಕ್ರಿ ಸರ್ಕಲ್, ಪ್ಯಾಲೆಸ್ ರಸ್ತೆ, ಟಿವಿ ಟವರ್ ರಸ್ತೆ, ಶಂಕರಮಠ, ಕಾಮಾಕ್ಷಿಪಾಳ್ಯ ಮತ್ತಿತರ ಪ್ರದೇಶಗಳ ಗೋಡೆಗಳಲ್ಲಿ ಈ ಪೋಸ್ಟರ್ ಗಳನ್ನು ಅಂಟಿಸಲಾಗಿದೆ. ಇದರ ಸಂಖ್ಯೆ ಸಾವಿರಕ್ಕಿಂತಲೂ ಹೆಚ್ಚಿದೆ ಎನ್ನಲಾಗಿದೆ.

- Advertisement -

ರಾಜ್ಯ ಬಿಜೆಪಿ ಸರಕಾರ ಕೊರೋನಾ ಸಂಕಷ್ಟ ಕಾಲದಲ್ಲೂ ಹಗರಣ ನಡೆಸಿದೆ. ನಿಮ್ಮದು ಲೂಟಿ ಮಾಡಲು ನಿಂತಿರುವ ಸೋಂಕಿನ ಸರ್ಕಾರ ಎಂಬ ಭಿತ್ತಿ ಪತ್ರಗಳನ್ನು ಅನಾಮಿಕರು ಮಧ್ಯರಾತ್ರಿ ನಗರದಲ್ಲೆಲ್ಲಾ ಅಂಟಿಸಿದ್ದಾರೆ. ಯಾರಿದನ್ನು ಅಂಟಿಸಿದ್ದಾರೆ ಎನ್ನುವುದರ ಕುರಿತು ಮಾಹಿತಿ ಇಲ್ಲವಾದರೂ, ರಾಜ್ಯ ಬಿಜೆಪಿ ಸರ್ಕಾರ ಕೊರೋನಾ ಹೆಸರಿನಲ್ಲಿ ಎರಡು ಸಾವಿರ ಕೋಟಿ ಲೂಟಿ ಮಾಡಿದೆ ಎಂದು ಅದರಲ್ಲಿ ಬರೆಯಲಾಗಿದೆ. ಈ ಭಿತ್ತಿ ಪತ್ರಗಳನ್ನು ಅಂಟಿಸಿರುವವರನ್ನು  ಪತ್ತೆ ಹಚ್ಚುವಂತೆ ರಾಜ್ಯ ಸರ್ಕಾರ ಬಿಬಿಎಂಪಿ ಮತ್ತು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

Join Whatsapp